ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 1,200 ಕೋಟಿ ಬಂಡವಾಳ ಸಂಗ್ರಹಿಸಿದ ಡೀಲ್‌ಶೇರ್‌

Last Updated 30 ಜನವರಿ 2022, 17:18 IST
ಅಕ್ಷರ ಗಾತ್ರ

ಬೆಂಗಳೂರು: ಮೂರು ವರ್ಷಗಳ ಹಿಂದೆ ಆರಂಭವಾದ ಇ–ವಾಣಿಜ್ಯ ನವೋದ್ಯಮ ಡೀಲ್‌ಶೇರ್‌ ಈಚೆಗೆ ಒಟ್ಟು ₹ 1,238 ಕೋಟಿ ಬಂಡವಾಳ ಸಂಗ್ರಹಿಸಿರುವುದಾಗಿ ತಿಳಿಸಿದೆ. ಡ್ರಾಗನೀರ್‌ ಇನ್ವೆಸ್ಟ್‌ಮೆಂಟ್ ಗ್ರೂಪ್, ಕೋರಾ ಕ್ಯಾಪಿಟಲ್, ಯುನಿಲಿವರ್ ವೆಂಚರ್ಸ್ ಈ ಕಂಪನಿಯಲ್ಲಿ ಹೂಡಿಕೆ ಮಾಡಿವೆ.

ಇವಲ್ಲದೆ, ಟೈಗರ್ ಗ್ಲೋಬಲ್ ಮತ್ತು ಆಲ್ಫಾ ವೇವ್ ಗ್ಲೋಬಲ್ (ಫಾಲ್ಕನ್ ಎಜ್) ಕೂಡ ಡೀಲ್‌ಶೇರ್‌ನಲ್ಲಿ ಹೂಡಿಕೆ ಮಾಡಿವೆ. ಈ ಸುತ್ತಿನಲ್ಲಿ ಸಂಗ್ರಹಿಸಿರುವ ಬಂಡವಾಳವನ್ನು ತಂತ್ರಜ್ಞಾನ, ದತ್ತಾಂಶ ವಿಜ್ಞಾನಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಅಲ್ಲದೆ, ಕಂಪನಿಯ ಸರಕು ಸಾಗಣೆ ಮೂಲಸೌಕರ್ಯವನ್ನು ಹತ್ತು ಪಟ್ಟು ಹೆಚ್ಚಿಸಿಕೊಳ್ಳಲು ಸಹ ಬಂಡವಾಳವನ್ನು ಬಳಸಿಕೊಳ್ಳಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

‘ದೇಶದಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಇ–ವಾಣಿಜ್ಯ ಕಂಪನಿಗಳ ಸಾಲಿನಲ್ಲಿ ಡೀಲ್‌ಶೇರ್ ಕೂಡ ಒಂದು. ಹಿಂದಿನ ವರ್ಷದಲ್ಲಿ ನಮ್ಮ ಆದಾಯ ಮತ್ತು ಗ್ರಾಹಕರ ನೆಲೆಯು 13 ಪಟ್ಟು ಹೆಚ್ಚಳ ಕಂಡಿದೆ. ಒಂದು ಕೋಟಿಗೂ ಹೆಚ್ಚಿನ ಸಂಖ್ಯೆಯ ಗ್ರಾಹಕರು ನಮಗೆ ಇದ್ದಾರೆ. 100ಕ್ಕೂ ಹೆಚ್ಚಿನ ನಗರಗಳಲ್ಲಿ ನಮ್ಮ ಕಾರ್ಯಾಚರಣೆ ಇದೆ’ ಎಂದು ಕಂಪನಿಯ ಸ್ಥಾಪಕ, ಸಿಇಒ ವಿನೀತ್ ರಾವ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT