ಸೋಮವಾರ, ಮೇ 25, 2020
27 °C

‘ಕೋವಿಡ್‌‘ ಸಾವು: ಜೀವ ವಿಮೆ ಪರಿಹಾರಕ್ಕೆ ಅರ್ಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜೀವ ವಿಮೆ ಪಾಲಿಸಿ ಖರೀದಿಸಿದವರು ಒಂದು ವೇಳೆ ’ಕೋವಿಡ್‌–19’ನಿಂದಾಗಿ ಮೃತಪಟ್ಟರೆ ಅವರ ಕುಟುಂಬಕ್ಕೆ ಮರಣ ಪರಿಹಾರ ಕೊಡುವುದು ಎಲ್ಲ ಜೀವ ವಿಮೆ ಕಂಪನಿಗಳ ಕರ್ತವ್ಯವಾಗಿದೆ ಎಂದು ಜೀವ ವಿಮೆ ಮಂಡಳಿಯು ತಿಳಿಸಿದೆ.

‘ಕೋವಿಡ್‌–19’  ಪ್ರಕರಣಗಳಲ್ಲಿನ ಯಾವುದೇ ಸಾವಿನ ಪ್ರಕರಣಗಳ ಕ್ಲೇಮ್‌ಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿ ಪರಿಹಾರ ಧನ ವಿತರಿಸಲು ಸರ್ಕಾರಿ ಮತ್ತು ಖಾಸಗಿ ವಿಮೆ ಕಂಪನಿಗಳು ಬದ್ಧವಾಗಿರಬೇಕು. ಇಂತಹ ಸಾವಿನ ಕ್ಲೇಮ್‌ ಪ್ರಕರಣಗಳಲ್ಲಿ ‘ಅನಿರೀಕ್ಷಿತ ಸಂದರ್ಭ’ ನಿಯಮವು ಅನ್ವಯಗೊಳ್ಳುವುದಿಲ್ಲ ಎಂದು ಮಂಡಳಿಯು ಹೇಳಿಕೆಯಲ್ಲಿ ತಿಳಿಸಿದೆ.

‘ಎಲ್ಲ ವಿಮೆ ಕಂಪನಿಗಳು ತಮ್ಮ ಗ್ರಾಹಕರಿಗೆ ವೈಯಕ್ತಿಕವಾಗಿ ಈ ಮಾಹಿತಿ ನೀಡಲು ಸೂಚಿಸಲಾಗಿದೆ’ ಎಂದು ಮಂಡಳಿಯ ಪ್ರಧಾನ ಕಾರ್ಯದರ್ಶಿ ಎಸ್‌. ಎನ್‌. ಭಟ್ಟಾಚಾರ್ಯ ತಿಳಿಸಿದ್ದಾರೆ.

ವಿಮೆ ಪರಿಹಾರ ಕುರಿತ ‘ಅನಿರೀಕ್ಷಿತ ಸಂದರ್ಭ‘ ನಿಯಮಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಬೇಕು ಎಂದು ಗ್ರಾಹಕರು ಜೀವ ವಿಮೆ ಕಂಪನಿಗಳಿಗೆ ಮನವಿ ಮಾಡಿಕೊಂಡಿದ್ದರು.

‘ಸದ್ಯದ ಬಿಕ್ಕಟ್ಟಿನ ಸಂದರ್ಭದಲ್ಲಿ ಜೀವ ವಿಮೆಯ ಎಲ್ಲ ಕಂಪನಿಗಳು ತಮ್ಮ ಗ್ರಾಹಕರ ಬೆಂಬಲಕ್ಕೆ ನಿಲ್ಲಬೇಕು. ತಪ್ಪು ಮಾಹಿತಿಗಳು ಗ್ರಾಹಕರಲ್ಲಿ ಗೊಂದಲ ಮೂಡಿಸಬಾರದು‘ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು