ನವದೆಹಲಿ (ಪಿಟಿಐ): ವಿಪರೀತವಾದ ಬಿಸಿಗಾಳಿಯಿಂದ ರಕ್ಷಿಸಿಕೊಳ್ಳಲು ಡೆಲಿವರಿ ಪಾಲುದಾರರಿಗೆ ವಿಶ್ರಾಂತಿ ತಾಣಗಳನ್ನು ನಿರ್ಮಾಣ ಮಾಡುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿವಿಧ ಕಂಪನಿಗಳು ತಿಳಿಸಿವೆ.

ದೇಶದ ಹಲವು ಪ್ರದೇಶಗಳಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಾಗಿದೆ. ವಿವಿಧ ಉತ್ಪನ್ನಗಳನ್ನು ಗ್ರಾಹಕರಿದ್ದಲ್ಲಿಗೆ ತಲುಪಿಸುವ ಡೆಲಿವರಿ ಪಾಲುದಾರರು ವಾಹನ ದಟ್ಟಣೆಯ ನಡುವೆ ಈ ಸುಡು ಬಿಸಿಲಿನಲ್ಲಿ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ. ಇದರಿಂದ ಅವರು ನಿರ್ಜಲೀಕರಣ, ಬಿಸಿಲಿನ ತಾಪಕ್ಕೆ ತುತ್ತಾಗುತ್ತಿದ್ದಾರೆ.

ತ್ವರಿತವಾಗಿ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸಬೇಕಾದ ಒತ್ತಡದಿಂದ ಗಿಗ್ ಕಾರ್ಮಿಕರು ಮಧ್ಯಾಹ್ನದ ಬಿಸಿಲಿ ನಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ, ಕೆಲವು ಕಂಪನಿಗಳು ಹವಾನಿಯಂತ್ರಿತ ವಿಶ್ರಾಂತಿ ತಾಣಗಳನ್ನು ಕೂಡ ಸ್ಥಾಪಿಸಲು ಮುಂದಾಗಿವೆ.

ಇ–ಕಾಮರ್ಸ್ ವಲಯದ ಅಮೆಜಾನ್ನ ಕ್ವಿಕ್ ಕಾಮರ್ಸ್ ವಿಭಾಗವಾಗಿರುವ ‘ಅಮೆಜಾನ್ ನೌ’ಮೂಲಕ ‘ಪ್ರಾಜೆಕ್ಟ್ ಆಶ್ರಯ’ ಹೆಸರಿನಲ್ಲಿ ಪ್ರಮುಖ ನಗರಗಳಲ್ಲಿ 100 ಹವಾನಿಯಂತ್ರಿತ ವಿಶ್ರಾಂತಿ ತಾಣಗಳನ್ನು ಆರಂಭಿಸಲಾಗಿದೆ. ಈ ತಾಣದಲ್ಲಿ ಕುಡಿಯುವ ನೀರು, ಚಾರ್ಜಿಂಗ್ ಪಾಯಿಂಟ್, ಆರಾಮದಾಯಕ ಆಸನಗಳು, ಶೌಚಾಲಯ, ಪ್ರಥಮ ಚಿಕಿತ್ಸೆ ನೆರವು ಸೇರಿದಂತೆ ವಿವಿಧ ಸೌಲಭ್ಯಗಳಿವೆ. ಅಲ್ಲದೆ ಗಿಗ್ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಎಂದು ತಿಳಿಸಿದೆ.

ಇದೇ ರೀತಿ ಜೊಮಾಟೊ ಕಂಪನಿ ಸಹ, ರೆಸ್ಟೋರೆಂಟ್ ಪಾಲುದಾರು, ಟಿವಿಎಸ್ ಮತ್ತು ಶೆಲ್ ಕಂಪನಿಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದು, 5 ಸಾವಿರಕ್ಕೂ ಅಧಿಕ ವಿಶ್ರಾಂತಿ ತಾಣಗಳನ್ನು ನಿರ್ಮಿಸಿದೆ. ಜೊಮಾಟೊ ಮತ್ತು ಬ್ಲಿಂಕಿಟ್ ಡೆಲಿವರಿ ಪಾಲುದಾರರಿಗೆ ಆರೋಗ್ಯ ವಿಮೆಯನ್ನು ನೀಡುತ್ತಿದೆ.

ಸರಕುಗಳನ್ನು ದಾಸ್ತಾನು ಮಾಡುವ ಕೇಂದ್ರಗಳು (ಡಾರ್ಕ್ಸ್ಟೋರ್) ಮತ್ತು ಕಂಪನಿಯ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಜಾಗವನ್ನು ಮೀಸಲಿರಿಸಿ, ಹವಾನಿಯಂತ್ರಿತ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಪಾಲುದಾರರಿಗೆ ಬಿಸಿಲಿನಿಂದ ರಕ್ಷಣೆ ನೀಡಲಿದೆ ಎಂದು ಜೆಪ್ಟೊ ತಿಳಿಸಿದೆ.

ಎಟರ್ನಲ್ ಮತ್ತು ಸ್ವಿಗ್ಗಿ ಕಂಪನಿಗಳು ತಂಪಾಗಿಸುವ ಜಾಕೆಟ್ಗಳನ್ನು ಬಿಡುಗಡೆ ಮಾಡಿವೆ. ಜೊಮಾಟೊ ಸಬ್ಸಿಡಿ ದರದಲ್ಲಿ ಹಗುರವಾದ ಸನ್ಸ್ಕ್ರೀನ್ ಜಾಕೆಟ್ಗಳನ್ನು ನೀಡುತ್ತಿದೆ, ವಿವಿಧ ಕಂಪನಿಗಳು ಒಆರ್ಎಸ್, ಗ್ಲುಕೋಸ್ ಸ್ಯಾಚೆಟ್ಗಳು ಮತ್ತು ಎಲೆಕ್ಟ್ರೋಲೈಟ್ ಪೌಡರ್ಗಳನ್ನು ಒಳಗೊಂಡಿರುವ ಬೇಸಿಗೆಯ ಕಿಟ್ಗಳನ್ನು ಪಾಲುದಾರರಿಗೆ ನೀಡುತ್ತಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-51-964521736

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.