ನವದೆಹಲಿ: ನಮ್ಮ ದೇಶವು ಹತ್ತಿ ಉತ್ಪಾದನೆಯಲ್ಲಿ ಸಾವಲಂಬನೆ ಸಾಧಿಸಲು ಹತ್ತಿಯ ಮೇಲೆ ಈಗಿರುವ ಎಪಿಎಂಸಿ ಸೆಸ್ ಮತ್ತು ಜಿಎಸ್‌ಟಿಯನ್ನು ತೆಗೆದು ಹಾಕಬೇಕು ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಗ್ರಹಿಸಿದರು.
ರಾಜ್ಯಸಭೆಯಲ್ಲಿ ಗುರುವಾರ ಮಾತನಾಡಿದ ಅವರು, ‘ಹೊರದೇಶಗಳಿಂದ ಕಚ್ಚಾ ಹತ್ತಿಯ ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಬೇಕು. ಗಂಭೀರ ಸಮಸ್ಯೆ ಎದುರಿಸುತ್ತಿರುವ ಹತ್ತಿ ಬೆಳೆಗಾರರ ರೈತರ ಹಿತ ಕಾಪಾಡುವುದರ ಜೊತೆಗೆ 4,000 ಹತ್ತಿ ಜಿನ್ನಿಂಗ್ ಸಂಬಂಧಿತ ಸಣ್ಣ ಕೈಗಾರಿಕೆಗಳು, 3,000 ನೂಲುವ ಗಿರಣಿಗಳು ಸೇರಿದಂತೆ ದೇಶೀಯ ಜವಳಿ ಉದ್ಯಮ ರಕ್ಷಿಸಬೇಕು’ ಎಂದು ಒತ್ತಾಯಿಸಿದರು.