ಗುರುವಾರ , ನವೆಂಬರ್ 14, 2019
18 °C

ಧನ್‌ತೇರಸ್‌: ಶುಕ್ರವಾರ ಚಿನ್ನದ ಇಟಿಎಫ್‌ ವಹಿವಾಟು ವಿಸ್ತರಣೆ

Published:
Updated:

ನವದೆಹಲಿ: ಧನ್‌ತೇರಸ್‌ ನಿಮಿತ್ತ, ಶುಕ್ರವಾರದ ಷೇರುಪೇಟೆ ವಹಿವಾಟಿನಲ್ಲಿ (ಬಿಎಸ್‌ಇ, ನಿಫ್ಟಿ) ಚಿನ್ನದ ವಿನಿಮಯ ವಹಿವಾಟು ನಿಧಿ (ಇಟಿಎಫ್‌) ಮತ್ತು ಚಿನ್ನದ ಬಾಂಡ್‌ಗಳ ವಹಿವಾಟಿನ ಅವಧಿ ಹೆಚ್ಚಿಸಲಾಗಿದೆ.

ದೀಪಾವಳಿಗೆ ಎರಡು ದಿನ ಮುಂಚೆ ಬರುವ ಧನ್‌ತೇರಸ್‌ ದಿನ ಚಿನ್ನದ ಇಟಿಎಫ್‌ ಮತ್ತು ಬಾಂಡ್‌ಗಳಲ್ಲಿನ ವಹಿವಾಟಿನ ಅವಧಿ ಸಂಜೆ 7 ಗಂಟೆಯವರೆಗೆ ಇರಲಿದೆ. ಮಧ್ಯಾಹ್ನ 3.30ಕ್ಕೆ ವಹಿವಾಟು ಕೊನೆಗೊಂಡರೂ, ಸಂಜೆ 5ಕ್ಕೆ ಮತ್ತೆ ಆರಂಭಗೊಂಡು 7ಗಂಟೆಯವರೆಗೆ ನಡೆಯಲಿದೆ.

ಚಿನ್ನದ ಇಟಿಎಫ್‌ದ ಪ್ರತಿಯೊಂದು ಯುನಿಟ್‌, ಒಂದು ಗ್ರಾಂ ಚಿನ್ನಕ್ಕೆ ಸಮಾನವಾಗಿರುತ್ತದೆ. ಚಿನ್ನದ ಬಾಂಡ್‌ಗಳು ಸರ್ಕಾರದ ಸಾಲಪತ್ರಗಳಾಗಿದ್ದು ಗ್ರಾಂ ಲೆಕ್ಕದಲ್ಲಿ ಇರುತ್ತವೆ. ಭೌತಿಕವಾಗಿ ಚಿನ್ನವನ್ನು ಬಳಿಯಲ್ಲಿ ಇಟ್ಟುಕೊಳ್ಳುವುದಕ್ಕೆ ಇವು ಪರ್ಯಾಯವಾಗಿರುತ್ತವೆ.

ಮುಹೂರ್ತ ವಹಿವಾಟು: ದೀಪಾವಳಿ ಲಕ್ಷ್ಮಿ ಪೂಜೆಯ ಅಂಗವಾಗಿ ಭಾನುವಾರ (ಅ. 27) ಸಂಜೆ 6.15 ರಿಂದ 7.15ರವರೆಗೆ ಷೇರುಪೇಟೆಯಲ್ಲಿ ಮುಹೂರ್ತ ವಹಿವಾಟು ನಡೆಯಲಿದೆ.

ಪ್ರತಿಕ್ರಿಯಿಸಿ (+)