ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಚ್‌ಎಫ್‌ಎಲ್‌ ಬಂಡವಾಳ ಸಂಗ್ರಹ

Last Updated 8 ಜೂನ್ 2019, 16:39 IST
ಅಕ್ಷರ ಗಾತ್ರ

ಬೆಂಗಳೂರು:ಆರ್ಥಿಕ ಸಂಕಷ್ಟದಲ್ಲಿರುವ ಗೃಹ ಹಣಕಾಸು ಸಂಸ್ಥೆ ದಿವಾನ್‌ ಹೌಸಿಂಗ್ ಫೈನಾನ್ಸ್‌ ಲಿಮಿಟೆಡ್‌ (ಡಿಎಚ್‌ಎಫ್‌ಎಲ್‌), ಈ ಬಿಕ್ಕಟ್ಟಿನಿಂದ ಹೊರ ಬರಲು ವಿವಿಧ ಹೂಡಿಕೆದಾರರಿಂದ ₹ 15 ಸಾವಿರ ಕೋಟಿ ಸಂಗ್ರಹಿಸಲು ಮುಂದಾಗಿದೆ.

ಬ್ಲಾಕ್‌ಸ್ಟೋನ್‌ನಿಂದ ₹ 2,700 ಕೋಟಿ ಮತ್ತು ವಾರ್‌ಬಗ್‌ ಪಿಂಕಸ್‌ನಿಂದ ₹ 1,100 ಕೋಟಿ ಸಂಗ್ರಹಿಸಲು ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಓಕ್‌ಬ್ರಿಜ್‌ ಕ್ಯಾಪಿಟಲ್‌ ಕಂಪನಿಯಿಂದ ₹ 11 ಸಾವಿರ ಕೋಟಿ ಬಂಡವಾಳದ ನೆರವೂ ಸಿಗಲಿದೆ. ಮುಂದಿನ ವಾರ ಈ ಹೂಡಿಕೆಗೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ರೆಪೊದರಕ್ಕೆ ಗೃಹ ಸಾಲ: ಎಸ್‌ಬಿಐ ನವದೆಹಲಿ (ಪಿಟಿಐ):ಜುಲೈ 1 ರಿಂದ ಗೃಹ ಸಾಲದ ಬಡ್ಡಿದರವೂ ರೆಪೊ ದರದ ಬದಲಾವಣೆಗಳಿಗೆ ಒಳಪಡಲಿದೆ ಎಂದುಎಸ್‌ಬಿಐ ಹೇಳಿದೆ.

ಆರ್‌ಬಿಐ ರೆಪೊ ದರ ತಗ್ಗಿಸಿರುವುದರಿಂದ ಉಳಿತಾಯ ಖಾತೆಯಲ್ಲಿ
₹ 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ ನೀಡುವ ಬಡ್ಡಿದರವನ್ನುಶೇ 2.75 ರಿಂದ ಶೇ 3ಕ್ಕೆ ಹೆಚ್ಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT