ನವದೆಹಲಿ: ಕಚ್ಚಾ ತೈಲದ ಬೆಲೆಯು ತೀವ್ರ ಏರಿಕೆ ಕಂಡಿದ್ದರೂ ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನಗಳ ಮಾರಾಟ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸದೆ ಇರುವ ಪರಿಣಾಮವಾಗಿ ಲೀಟರ್ ಪೆಟ್ರೋಲ್ಗೆ ₹18ರಷ್ಟು, ಡೀಸೆಲ್ಗೆ ₹35ರಷ್ಟು ನಷ್ಟ ಅನುಭವಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸರ್ಕಾರದ ನಿಯಂತ್ರಣದಿಂದ ದಶಕದ ಹಿಂದೆಯೇ ಮುಕ್ತವಾಗಿಸಲಾಗಿದೆ. ಆದರೆ ಸರ್ಕಾರಿ ಸ್ವಾಮ್ಯದ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್) ಪೆಟ್ರೋಲ್, ಡೀಸೆಲ್ ಮಾರಾಟ ಬೆಲೆಯನ್ನು 2022ರ ಏಪ್ರಿಲ್ನಿಂದ ಬದಲಾವಣೆ ಮಾಡಿಲ್ಲ.

ಈ ವರ್ಷದ ಆರಂಭದಲ್ಲಿ ಪ್ರತಿ ಬ್ಯಾರಲ್ಗೆ 70 ಡಾಲರ್ನಷ್ಟಿದ್ದ ಕಚ್ಚಾ ತೈಲದ ಬೆಲೆಯು ಇರಾನ್ ಮೇಲೆ ಅಮೆರಿಕ–ಇಸ್ರೇಲ್ ಒಟ್ಟಾಗಿ ದಾಳಿ ನಡೆಸಿದ ನಂತರದಲ್ಲಿ 120 ಡಾಲರ್ವರೆಗೂ ಹೆಚ್ಚಳ ಕಂಡಿತ್ತು.

ಕಚ್ಚಾ ತೈಲದ ಬೆಲೆಯು ಕಳೆದ ತಿಂಗಳು ತೀರಾ ದುಬಾರಿ ಆಗಿದ್ದಾಗ ಈ ಮೂರು ಕಂಪನಿಗಳು ದಿನಕ್ಕೆ ಒಟ್ಟು ₹2,400 ಕೋಟಿಯಷ್ಟು ನಷ್ಟ ಅನುಭವಿಸುತ್ತಿದ್ದವು. ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಲೀಟರಿಗೆ ತಲಾ ₹10ರಷ್ಟು ತಗ್ಗಿಸಿದ ನಂತರದಲ್ಲಿ ನಷ್ಟವು ₹1,600 ಕೋಟಿಗೆ ತಗ್ಗಿದೆ. ಎಕ್ಸೈಸ್ ಸುಂಕದ ಇಳಿಕೆಯನ್ನು ಕಂಪನಿಗಳು ಗ್ರಾಹಕರಿಗೆ ವರ್ಗಾವಣೆ ಮಾಡಿಲ್ಲ; ಅದರ ಬದಲಿಗೆ ಅವು ಅದನ್ನು ತಮ್ಮ ನಷ್ಟ ಕಡಿಮೆ ಮಾಡಿಕೊಳ್ಳಲು ಬಳಸಿವೆ ಎಂದು ಮೂಲಗಳು ವಿವರಿಸಿವೆ.

ಮಾರ್ಚ್ನಲ್ಲಿ ಆಗಿರುವ ನಷ್ಟವು ಜನವರಿ ಮತ್ತು ಫೆಬ್ರುವರಿಯ ಅಷ್ಟೂ ಗಳಿಕೆಯನ್ನು ಇಲ್ಲವಾಗಿಸಿದೆ. ಮೂರೂ ಕಂಪನಿಗಳು ಮಾರ್ಚ್ ತ್ರೈಮಾಸಿಕದಲ್ಲಿ ನಷ್ಟ ವರದಿ ಮಾಡುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.

ಕಚ್ಚಾ ತೈಲದ ಬೆಲೆಯು ಬ್ಯಾರಲ್ಗೆ 10 ಡಾಲರ್ನಷ್ಟು ಹೆಚ್ಚಾದರೆ ಪೆಟ್ರೋಲ್, ಡೀಸೆಲ್ ಮಾರಾಟ
ದಿಂದ ಕಂಪನಿಗಳಿಗೆ ಲೀಟರ್ಗೆ ಸರಿಸುಮಾರು ₹6ರಷ್ಟು ನಷ್ಟ ಆಗುತ್ತದೆ ಎಂದು ಬ್ರೋಕರೇಜ್ ಕಂಪನಿ ಮಕ್ವೆರಿ ಹೇಳಿದೆ.

ವಿವಿಧ ರಾಜ್ಯಗಳ ವಿಧಾನಸಭೆಗೆ ಈಗ ನಡೆಯುತ್ತಿರುವ ಚುನಾವಣೆಗಳು ಪೂರ್ಣಗೊಂಡ ನಂತರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಆಗುವ ಸಾಧ್ಯತೆ ಇದೆ ಎಂದು ಕೂಡ ಮಕ್ವೆರಿ ಅಂದಾಜಿಸಿದೆ.

‘ತಾಳಿಕೊಳ್ಳುವ ಶಕ್ತಿ ದೇಶಕ್ಕಿದೆ’

ನವದೆಹಲಿ (ಪಿಟಿಐ): ಭಾರತದ ಅರ್ಥ ವ್ಯವಸ್ಥೆ ಹಾಗೂ ಇಲ್ಲಿನ ಹಣಕಾಸು ವಲಯದ ಮೂಲಭೂತ ಅಂಶಗಳು ಬಲಿಷ್ಠವಾಗಿವೆ. ಕಚ್ಚಾ ತೈಲದ ಬೆಲೆ ಏರಿಕೆಯಿಂದ ಆಗಿರುವ ಆಘಾತ ತಾಳಿಕೊಳ್ಳುವ ಶಕ್ತಿಯನ್ನು ಅವು ದೇಶಕ್ಕೆ ನೀಡಲಿವೆ ಎಂದು ಎಸ್ಆ್ಯಂಡ್ಪಿ ಗ್ಲೋಬಲ್ ರೇಟಿಂಗ್ಸ್ ಸಂಸ್ಥೆ ಹೇಳಿದೆ.

ಆದರೆ, ಕಚ್ಚಾ ತೈಲದ ಸರಾಸರಿ ಬೆಲೆಯು 2026ರಲ್ಲಿ ಪ್ರತಿ ಬ್ಯಾರಲ್ಗೆ 130 ಡಾಲರ್ ಮಟ್ಟದಲ್ಲಿ ಇದ್ದರೆ ದೇಶದ ಜಿಡಿಪಿ ಬೆಳವಣಿಗೆ ದರವು ಶೇ 0.80ರಷ್ಟು ಕಡಿಮೆ ಆಗಬಹುದು ಎಂದು ಅದು ಅಂದಾಜು ಮಾಡಿದೆ.

ಕೆಟ್ಟ ಪರಿಸ್ಥಿತಿಯಲ್ಲಿ ಕಚ್ಚಾ ತೈಲದ ಬೆಲೆಯು 2026ರಲ್ಲಿ 130 ಡಾಲರ್ ಆಗಬಹುದು, 2027ರಲ್ಲಿ ಅದು 100 ಡಾಲರ್ ಆಗಬಹುದು ಎಂದು ಸಂಸ್ಥೆ ಅಂದಾಜು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.