ಬುಧವಾರ, ಏಪ್ರಿಲ್ 21, 2021
32 °C

ಡೀಸೆಲ್‌ ಬೆಲೆ: ದಾಖಲೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಹೆಚ್ಚಳವು ಸತತ 16ನೇ ದಿನವೂ ಮುಂದುವರೆದಿದ್ದು ಸೋಮವಾರ ಕ್ರಮವಾಗಿ 33 ಪೈಸೆ ಮತ್ತು 58 ಪೈಸೆಗಳಂತೆ ಏರಿಕೆ ಮಾಡಲಾಗಿದೆ.

 ನಿರಂತರ ಹೆಚ್ಚಳದ ಫಲವಾಗಿ ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ ಈಗ ₹ 9.46ರಷ್ಟು ಮತ್ತು ಪೆಟ್ರೋಲ್‌ ಬೆಲೆ ₹ 8.30ರಷ್ಟು ತುಟ್ಟಿಯಾಗಿದೆ. ಬೆಂಗಳೂರಿನಲ್ಲಿ ಈಗ ಡೀಸೆಲ್ ಬೆಲೆ  ₹ 75.04 ಮತ್ತು ಪೆಟ್ರೋಲ್‌ ಬೆಲೆ ₹ 82.12 ಕ್ಕೆ ತಲುಪಿದೆ.

2002ರಲ್ಲಿ ಇಂಧನ ಬೆಲೆಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿದ ನಂತರ ಬೆಲೆ ಏರಿಕೆಯು ದಿನೇ ದಿನೇ ಹೊಸ ದಾಖಲೆ ಬರೆಯುತ್ತಿದೆ. 2017ರ ಮೇನಿಂದ ಪ್ರತಿ ದಿನ ದರ ಪರಿಷ್ಕರಿಸಲಾಗುತ್ತಿದೆ.

ಡೀಸೆಲ್‌ ಈಗ ದೇಶದಾದ್ಯಂತ ಪ್ರತಿ ಲೀಟರ್‌ಗೆ ₹ 75 ರಿಂದ ₹ 79ರ ಮಟ್ಟದಲ್ಲಿ ಮಾರಾಟವಾಗುತ್ತಿದೆ. ಇದರಿಂದ ಸರಕು ಸಾಗಾಣಿಕೆ ವೆಚ್ಚ ಹೆಚ್ಚಳವಾಗಿ ಆಹಾರ ಪದಾರ್ಥಗಳ ಬೆಲೆ ದುಬಾರಿಯಾಗಲಿದೆ. ಬೇಳೆಕಾಳು, ಸಕ್ಕರೆ, ಹಾಲು, ಅಕ್ಕಿ ಮತ್ತು ಗೋಧಿ ಬೆಲೆ ತಕ್ಷಣಕ್ಕೆ ಏರಿಕೆಯಾಗಲಿವೆ. ಮುಂಬರುವ ದಿನಗಳಲ್ಲಿ  ಸೋಪ್‌, ಶಾಂಪು, ಬಿಸ್ಕಿಟ್‌ ದುಬಾರಿಯಾಗಲಿವೆ ಎಂದು ಪರಿಣತರು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು