ನೇರ ತೆರಿಗೆ ಸಂಗ್ರಹ ಗುರಿ ಅನುಮಾನ

ಶುಕ್ರವಾರ, ಏಪ್ರಿಲ್ 19, 2019
22 °C

ನೇರ ತೆರಿಗೆ ಸಂಗ್ರಹ ಗುರಿ ಅನುಮಾನ

Published:
Updated:

ನವದೆಹಲಿ: 2018–19ನೇ ಹಣಕಾಸು ವರ್ಷದ ನೇರ ತೆರಿಗೆ ಸಂಗ್ರಹದಲ್ಲಿ ₹ 50 ಸಾವಿರ ಕೋಟಿಗಳಷ್ಟು ಕೊರತೆಯಾಗುವ ಸಾಧ್ಯತೆ ಇದೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸರ್ಕಾರ, ನೇರ ತೆರಿಗೆಯಿಂದ ₹ 12 ಲಕ್ಷ ಕೋಟಿ ಸಂಗ್ರಹಿಸುವ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ, ಜಿಎಸ್‌ಟಿ ಸಂಗ್ರಹದಲ್ಲಿ ಇಳಿಕೆ, ವಿತ್ತೀಯ ಕೊರತೆ ನಿಯಂತ್ರಣದಿಂದಾಗಿ ₹ 11.5 ಲಕ್ಷ ಕೋಟಿಗಳಷ್ಟು ಸಂಗ್ರಹವಾಗಲಿದೆ ಎಂದು ಹೇಳಿದ್ದಾರೆ.

ಬಜೆಟ್‌ನಲ್ಲಿ ₹ 11.5 ಲಕ್ಷ ಸಂಗ್ರಹಿಸುವ ಅಂದಾಜು ಮಾಡಲಾಗಿತ್ತು. ಆದರೆ, ಕಾರ್ಪೊರೇಟ್‌ ತೆರಿಗೆಯಿಂದ ಹೆಚ್ಚು ಸಂಗ್ರಹಿಸುವ ನಿರೀಕ್ಷೆ
ಯಿಂದಾಗಿ ಸಂಗ್ರಹದ ಗುರಿಯನ್ನು ₹ 12 ಲಕ್ಷ ಕೋಟಿಗೆ ಏರಿಕೆ ಮಾಡಿತ್ತು.

ಜಿಎಸ್‌ಟಿ ಸಂಗ್ರಹದ ನಿರೀಕ್ಷೆಯನ್ನು ₹ 7.44 ಲಕ್ಷ ಕೋಟಿಯಿಂದ ₹ 6.44 ಲಕ್ಷ ಕೋಟಿಗೆ ತಗ್ಗಿಸಲಾಗಿತ್ತು. ಆದರೆ, ಜಿಎಸ್‌ಟಿ ಮಂಡಳಿ ಹಲವು ಬಾರಿ ತೆರಿಗೆ ದರಗಳನ್ನು ತಗ್ಗಿಸಿದೆ. ಹೀಗಾಗಿ ಈ ಅಂದಾಜನ್ನು ತಲುಪುವ ಬಗ್ಗೆ ಅನುಮಾನಗಳು ಮೂಡಿವೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !