ಬೆಂಗಳೂರು: ದಕ್ಷಿಣ ಭಾರತದ ಗ್ರಾಹಕರಿಗಾಗಿ ಡಿಶ್ ಟಿವಿ ಇಂಡಿಯಾ ಹೊಸದಾಗಿ ಭಾಷೆ ಆಧರಿತ ಮನರಂಜನೆಯ ಪ್ಯಾಕ್ಗಳನ್ನು ಘೋಷಿಸಿದೆ. ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡಿದ್ದು, ಹೊಸ ಕೊಡುಗೆಯು ಕೈಗೆಟುಕುವ ದರ, ನಿರಂತರ ಮನರಂಜನೆ ಹಾಗೂ ಸುಲಭ ವೀಕ್ಷಣೆಯ ಅನುಭವ ನೀಡಲಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಶ್ ಟಿವಿ ಇಂಡಿಯಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಮನೋಜ್ ದೋಭಾಲ್, ‘ತಿಂಗಳಿಗೆ ₹149ಕ್ಕೆ ಹೊಸ ಪ್ಯಾಕ್ಗಳು ಆರಂಭವಾಗಲಿದ್ದು, ಇದರಲ್ಲಿ ಮನರಂಜನೆ, ಸಿನಿಮಾ, ಪ್ರಾದೇಶಿಕ ಕಾರ್ಯಕ್ರಮಗಳು ಹಾಗೂ ಕ್ರೀಡಾ ಚಾನೆಲ್ಗಳು ಒಳಗೊಂಡಿವೆ. ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳ ಭಾಷೆಯ ಗ್ರಾಹಕರ ಅಭಿರುಚಿ ಯನ್ನು ಗಮನದಲ್ಲಿಟ್ಟುಕೊಂಡು ಈ ಪ್ಯಾಕ್ ಗಳನ್ನು ವಿನ್ಯಾಸಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಡಿಶ್ ಟಿವಿಯ ಮೂಲ ಪ್ಯಾಕ್ನಲ್ಲಿ 225ಕ್ಕೂ ಹೆಚ್ಚು ಚಾನೆಲ್ಗಳಿವೆ. ಕನ್ನಡ, ತೆಲುಗು ಮತ್ತು ಮಲೆಯಾಳ ಪ್ಯಾಕ್ಗಳಲ್ಲಿ ಪ್ರತಿ ಭಾಷೆಗೆ 30ಕ್ಕೂ ಹೆಚ್ಚು ಚಾನೆಲ್ಗಳನ್ನು ಸೇರಿಸಲಾಗಿದೆ. 36ಕ್ಕೂ ಹೆಚ್ಚು ತಮಿಳು ಚಾನೆಲ್ಗಳಿವೆ. ದೈನಂದಿನ ಧಾರಾವಾಹಿಗಳು, ಸಿನಿಮಾಗಳು, ಮನರಂಜನಾ ಕಾರ್ಯಕ್ರಮಗಳು ಹಾಗೂ ಕ್ರೀಡಾ ಚಾನೆಲ್ಗಳಿವೆ. ಗ್ರಾಹಕರಿಗೆ ತಮ್ಮ ಅಗತ್ಯಕ್ಕೆ ಅನುಗುಣವಾಗಿ ಪ್ಯಾಕ್ಗಳನ್ನು ಹೊಂದಾಣಿಕೆ ಮಾಡಿಕೊಳ್ಳುವ ಅವಕಾಶವಿದೆ’ ಎಂದರು.

‘ದಕ್ಷಿಣ ಭಾರತವು ದೇಶದ ಪ್ರಮುಖ ಟಿವಿ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಇಲ್ಲಿ ಪ್ರಾದೇಶಿಕ ಭಾಷೆ, ಸಿನಿಮಾ ಮತ್ತು ಕುಟುಂಬ ವೀಕ್ಷಣೆಗೆ ಹೆಚ್ಚಿನ ಮಹತ್ವವಿದೆ. ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳನ್ನು ಗಮನಿಸಿ ಡಿಶ್ ಟಿವಿ ತನ್ನ ಹೊಸ ಸೇವೆಯನ್ನು ಪರಿಚಯಿಸಿದೆ. ಜತೆಗೆ ‘ಸ್ಪೋರ್ಟ್ಸ್ ಆಲ್ವೇಸ್ ಆನ್’ ಎಂಬ ಕೊಡುಗೆ ಆರಂಭಿಸಿದೆ. ರಿಚಾರ್ಜ್ ವಿಳಂಬ ಅಥವಾ ತಾತ್ಕಾಲಿಕವಾಗಿ ಸೇವೆಯಲ್ಲಿ ವ್ಯತ್ಯಯವಾಗಿದ್ದರೂ ಪ್ರಮುಖ ಕ್ರೀಡಾ ಚಾನೆಲ್ಗಳನ್ನು ಮೂರು ತಿಂಗಳವರೆಗೆ ವೀಕ್ಷಿಸಬಹುದು’ ಎಂದು ಮಾಹಿತಿ ನೀಡಿದರು.

ಡಿಶ್ ಟಿವಿಯ ಮುಖ್ಯ ಹಣಕಾಸು ಅಧಿಕಾರಿ ಸುಖ್ಪ್ರೀತ್ ಸಿಂಗ್ ಸುದ್ದಿಗೋಷ್ಠಿಯಲ್ಲಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-51-566140168

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.