ಗುರುವಾರ , ಡಿಸೆಂಬರ್ 5, 2019
20 °C

ಷೇರು ವಿಕ್ರಯ: ₹ 53,558 ಕೋಟಿ ಸಂಗ್ರಹ

Published:
Updated:

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ (2018–19) ಇದುವರೆಗೆ ಷೇರು ವಿಕ್ರಯದಿಂದ ₹ 53,558 ಕೋಟಿ ಸಂಗ್ರಹವಾಗಿದೆ.

ಬಜೆಟ್‌ ಅಂದಾಜಿನ ಪ್ರಕಾರ, ಹಣಕಾಸು ವರ್ಷದ ಅಂತ್ಯದ ವೇಳೆಗೆ ₹ 80 ಸಾವಿರ ಕೋಟಿ ಸಂಗ್ರಹಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಲಾಗಿದೆ.

ಹಿಂದಿನ ವಾರ ‘ಭಾರತ್‌–22’ ಇಟಿಎಫ್‌ನಿಂದ ₹ 10 ಸಾವಿರ ಕೋಟಿ ಹಾಗೂ ಆ್ಯಕ್ಸಿಸ್‌ ಬ್ಯಾಂಕ್‌ನಲ್ಲಿನ ಷೇರು ವಿಕ್ರಯದಿಂದ ₹ 5,379 ಕೋಟಿ ಸಂಗ್ರಹವಾಗಿದೆ.

ಕೇಂದ್ರೋದ್ಯಮಗಳ (ಸಿಪಿಎಸ್‌ಇ)ಇಟಿಎಫ್‌ನಿಂದ ₹ 17 ಸಾವಿರ ಕೋಟಿ ಸಂಗ್ರಹವಾಗಿದೆ.

2019–20ನೇ ಹಣಕಾಸು ವರ್ಷದಲ್ಲಿ ಷೇರು ವಿಕ್ರಯದಿಂದ ₹ 90 ಸಾವಿರ ಕೋಟಿ ಸಂಗ್ರಹಿಸುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು