ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರು ವಿಕ್ರಯ: ಗುರಿ ಮೀರಿ ಸಾಧನೆ

Last Updated 24 ಮಾರ್ಚ್ 2019, 18:11 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷಕ್ಕೆ ನಿಗದಿಪಡಿಸಲಾಗಿದ್ದ ಷೇರು ವಿಕ್ರಯದ ಗುರಿ ಮೀರಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

‘₹ 80 ಸಾವಿರ ಕೋಟಿಗಳಷ್ಟು ಷೇರು ವಿಕ್ರಯದ ಗುರಿ ನಿಗದಿಪಡಿಸಲಾಗಿತ್ತು. ಶುಕ್ರವಾರದ ಹೊತ್ತಿಗೆ ₹ 85 ಸಾವಿರ ಕೋಟಿ ಸಂಗ್ರಹಗೊಂಡಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಟ್ವೀಟ್‌ ಮಾಡಿದ್ದಾರೆ.

ಕೇಂದ್ರೋದ್ಯಮಗಳ ಇಟಿಎಫ್‌ನ 5ನೇ ಕಂತಿನಿಂದ ₹ 9,500 ಕೋಟಿ ಸಂಗ್ರಹಗೊಂಡಿದೆ. ಸರ್ಕಾರಿ ಸ್ವಾಮ್ಯದ ಪವರ್‌ ಫೈನಾನ್ಸ್‌ ಕಾರ್ಪೊರೇಷನ್‌ (ಪಿಎಫ್‌ಸಿ), ರೂರಲ್‌ ಎಲೆಕ್ಟ್ರಿಫಿಕೇಷನ್‌ ಕಾರ್ಪೊರೇಷನ್‌ನಲ್ಲಿನ (ಆರ್‌ಇಸಿ) ಕೇಂದ್ರ ಸರ್ಕಾರದ ಶೇ 52.63 ಪಾಲು ಬಂಡವಾಳವನ್ನು ₹ 14,500 ಕೋಟಿಗೆ ಖರೀದಿಸಿದೆ. ಇದರಿಂದಾಗಿ ಗುರಿ ಮೀರಿದ ಸಾಧನೆ ಸಾಧ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT