ಅಪ್‌ಸ್ಟ್ಯಾಕ್ಸ್‌ನಿಂದ ಉಚಿತ ಡಿಮ್ಯಾಟ್ ಉತ್ಸವ

ಮಂಗಳವಾರ, ಮಾರ್ಚ್ 19, 2019
33 °C

ಅಪ್‌ಸ್ಟ್ಯಾಕ್ಸ್‌ನಿಂದ ಉಚಿತ ಡಿಮ್ಯಾಟ್ ಉತ್ಸವ

Published:
Updated:

ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೊಸ ಹೂಡಿಕೆದಾರರಿಗೆ ಪ್ರೋತ್ಸಾಹ ನೀಡಲು ಆನ್‍ಲೈನ್ ಡಿಸ್ಕೌಂಟ್ ಬ್ರೋಕಿಂಗ್ ಸಂಸ್ಥೆ ಅಪ್‍ಸ್ಟಾಕ್ಸ್ (upstax.com), ಇದೇ 7ರವರೆಗೆ ‘ಉಚಿತ ಡಿಮ್ಯಾಟ್ ಉತ್ಸವ’ ಏರ್ಪಡಿಸಿದೆ.

ಮೊದಲ ಬಾರಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ಉತ್ಸವದಲ್ಲಿ ಉಚಿತವಾಗಿ ಡಿಮ್ಯಾಟ್ ಖಾತೆಯನ್ನು ತೆರೆಯಬಹುದು. ಡಿಮ್ಯಾಟ್ ತೆರೆಯಲು ಇಚ್ಚಿಸುವವರು ‘ಅಪ್‌ಸ್ಟ್ಯಾಕ್ಸ್‌ಡಾಟ್‌ಕಾಂ’  ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ ಕೆಲವೇ ನಿಮಿಷಗಳಲ್ಲಿ ಖಾತೆ ತೆರೆಯುವ ಪ್ರಕ್ರಿಯೆ ಪೂರ್ಣಗೊಳಿಸಬಹುದು.

ಅಪ್‍ಸ್ಟ್ಯಾಕ್ಸ್, ಹೂಡಿಕೆದಾರರಿಗೆ ಕಾಗದರಹಿತ ನೋಂದಣಿ ಪ್ರಕ್ರಿಯೆ ಆರಂಭಿಸಿದ ಮೊದಲ ಷೇರು ಮಾರುಕಟ್ಟೆ ಕಂಪೆನಿಯಾಗಿದೆ.  ಸದಸ್ಯರ ಸಂಖ್ಯೆ 1.60 ಲಕ್ಷಕ್ಕೆ ಹೆಚ್ಚಳವಾಗಿದೆ. ₹ 20 ಸಾವಿರ ಕೋಟಿ ವಹಿವಾಟು ಇದರ ಮೂಲಕ ನಡೆಯುತ್ತಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !