ದೊಡ್ಡಬಳ್ಳಾಪುರ: ಆನ್ಲೈನ್ ಕಂಪನಿ ಪ್ಲಿಪ್ಕಾರ್ಟ್ 1 ಲೀಟರ್ ಹಾಲನ್ನು ₹1ಕ್ಕೆ ಮಾರಾಟ ಮಾಡಿದ್ದು, ಇದರಿಂದ ಬೆಂಗಳೂರು ಹಾಲು ಒಕ್ಕೂಟದ 50 ಸಾವಿರ ಲೀಟರ್ ಹಾಲಿನ ಮಾರಾಟ ಕುಸಿದಿದೆ. ಒಟ್ಟಾರೆ ರಾಜ್ಯದ ಹಾಲು ಉತ್ಪಾದಕರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಆರ್. ಚಂದ್ರತೇಜಸ್ವಿ ಆಗ್ರಹಿಸಿದ್ದಾರೆ.

ನಗರದ ಸಿಪಿಐಎಂ ತಾಲ್ಲೂಕು ಕೇಂದ್ರ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಫ್ಲಿಪ್ಕಾರ್ಟ್ಗೆ ಮೋಸದ ಹಾಲಿನ ವ್ಯಾಪಾರ ಮಾಡುವ ಅವಕಾಶ ಕಲ್ಪಿಸಿದವರು ಯಾರು ಎಂಬುದು ಪ್ರಶ್ನೆಯಾಗಿದೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಒಟ್ಟು 16 ಸಹಕಾರ ಒಕ್ಕೂಟಗಳಿವೆ. ಲಕ್ಷಾಂತರ ಬಡ ರೈತ ಕುಟುಂಬಗಳು ಹಾಲು ಉತ್ಪಾದನೆಯಲ್ಲಿ ತೊಡಗಿವೆ. ಪ್ರತಿದಿನ ಒಂದು ಕೋಟಿಗೂ ಹೆಚ್ಚು ಲೀಟರ್ ಹಾಲು ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದೆ. ಈಚೆಗೆ ಅಮೆರಿಕದ ದೈತ್ಯ ಕಂಪನಿ ವಾಲ್ ಮಾರ್ಟ್ ಫ್ಲಿಪ್ಕಾರ್ಟ್ ಅನ್ನು ಖರೀದಿಸಿದೆ. ಅಮೆರಿಕ-ಭಾರತ ನಡುವಿನ ಸುಂಕ ಒಪ್ಪಂದ ಮತ್ತು ಯೂರೋಪ್ ಯೂನಿಯನ್ನೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದದ ಹಿನ್ನೆಲೆಯಲ್ಲಿ ಹಾಲು ಉತ್ಪನ್ನಗಳನ್ನು ಭಾರತದಲ್ಲಿ ಮುಕ್ತವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಹಾಲಿನ ಉತ್ಪನ್ನಗಳ ಆಮದಿಗೆ ಅವಕಾಶ ಮಾಡಿಕೊಟ್ಟಲ್ಲಿ ದೇಶದ ಹಾಲು ಉತ್ಪಾದಕರು ಸರ್ವನಾಶವಾಗುತ್ತಾರೆ ಎಂದು ಎಚ್ಚರಿಸಿದರು.

ಫ್ಲಿಫ್ಕಾರ್ಟ್ 16.5ಲಕ್ಷ ಲೀಟರ್ ಹಾಲನ್ನು ₹1ರಂತೆ ಮಾರಾಟ ಮಾಡಿದೆ. ಇದರಿಂದ ಬೆಂಗಳೂರು ಹಾಲು ಒಕ್ಕೂಟದ ಮಾರಾಟದಲ್ಲಿ 50ಸಾವಿರ ಲೀಟರ್ ಕುಸಿತ ಕಂಡು ಬಂದಿದೆ. ರೈತರ ಹಿತ ರಕ್ಷಿಸಲು ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಮುಂದೆ ಇಂಥ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಚಂದ್ರತೇಜಸ್ವಿ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಂಪುರ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷೆ ಭಾಗ್ಯಮ್ಮ, ಸೊಣ್ಣೇನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ಸದಾಶಿವಮೂರ್ತಿ, ಸಿ.ಎಚ್. ರಾಮಕೃಷ್ಣಯ್ಯ, ಜಯರಾಮ್, ಶ್ರವಣೂರು ಕೆಂಪಣ್ಣ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-15-508884331

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.