ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 7 ಕೋಟಿಗಿಂತ ಹೆಚ್ಚು ಸಂಪತ್ತು ಇರುವವರ ಪ್ರಮಾಣ ಶೇಕಡ 11ರಷ್ಟು ಏರಿಕೆ

Last Updated 18 ಫೆಬ್ರುವರಿ 2022, 16:42 IST
ಅಕ್ಷರ ಗಾತ್ರ

ಮುಂಬೈ: ವೈಯಕ್ತಿಕವಾಗಿ ₹ 7 ಕೋಟಿಗಿಂತ ಹೆಚ್ಚಿನ ಸಂಪತ್ತು ಹೊಂದಿರುವವರ ಪ್ರಮಾಣವು ದೇಶದಲ್ಲಿ 2021ರಲ್ಲಿ ಶೇಕಡ 11ರಷ್ಟು ಹೆಚ್ಚಳ ಆಗಿದೆ ಎಂದು ಹುರೂನ್ ವರದಿ ಹೇಳಿದೆ.

2021ರ ಅಂತ್ಯದ ವೇಳೆಗೆ ದೇಶದಲ್ಲಿ ₹ 7 ಕೋಟಿಗಿಂತ ಹೆಚ್ಚಿನ ಸಂಪತ್ತು ಹೊಂದಿರುವ ಕುಟುಂಬಗಳ ಸಂಖ್ಯೆಯು 4.58 ಲಕ್ಷಕ್ಕೆ ತಲುಪಿದೆ.

ಆದರೆ, ಇಷ್ಟು ಸಂಪತ್ತು ಹೊಂದಿರುವವರ ಪೈಕಿ, ‘ವೃತ್ತಿ ಬದುಕಿನಲ್ಲಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಂತಸವಾಗಿದ್ದೇವೆ’ ಎಂದು ಹೇಳಿಕೊಳ್ಳುವವರ ಪ್ರಮಾಣವು ಶೇಕಡ 66ಕ್ಕೆ ಇಳಿಕೆಯಾಗಿದೆ. ಈ ಪ್ರಮಾಣವು 2020ರಲ್ಲಿ ಶೇ 72ರಷ್ಟು ಇತ್ತು.

ದೇಶದಲ್ಲಿ ಅಸಮಾನತೆ ಹೆಚ್ಚಾಗುತ್ತಿದೆ ಎಂಬ ಕಳವಳ ಜಾಸ್ತಿ ಆಗುತ್ತಿರುವ ಸಂದರ್ಭದಲ್ಲಿಯೇ ಈ ವರದಿಯು ಪ್ರಕಟವಾಗಿದೆ. 2026ರ ಸುಮಾರಿಗೆ ಇಷ್ಟು ಸಂಪತ್ತು ಹೊಂದಿರುವವರ ಪ್ರಮಾಣವು ಶೇ 30ರಷ್ಟು ಜಾಸ್ತಿ ಆಗಲಿದೆ ಎಂದು ವರದಿಯು ಅಂದಾಜು ಮಾಡಿದೆ.

ಮುಂಬೈನ ಒಟ್ಟು 20,300 ಕುಟುಂಬಗಳು ₹ 7 ಕೋಟಿಗಿಂತ ಹೆಚ್ಚಿನ ಸಂಪತ್ತು ಹೊಂದಿವೆ. ಹುರೂನ್ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಕೋಟ್ಯಧೀಶರ ಪೈಕಿ ಶೇಕಡ 19ರಷ್ಟು ಮಂದಿ ಮಾತ್ರ, ತಾವು ಗಳಿಸಿದ್ದನ್ನು ಸಮಾಜಕ್ಕೆ ದಾನವಾಗಿ ನೀಡುವ ವಿಚಾರದಲ್ಲಿ ನಂಬಿಕೆ ಹೊಂದಿರುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT