ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಧೀಶರ ಮೇಲೆ ಹಲ್ಲೆ: ಬಂಧನ

Last Updated 19 ಏಪ್ರಿಲ್ 2018, 19:50 IST
ಅಕ್ಷರ ಗಾತ್ರ

‌ಪಟ್ನಾ: ಗಯಾದಿಂದ ಪಟ್ನಾಕ್ಕೆ ಅಧಿಕಾರಿಗಳೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನ್ಯಾಯಧೀಶರೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ.

ಪುರಿಯ ಸೀತಾಮಾರಿ ಕೋರ್ಟ್‌ಗೆ ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್‌ ಆಗಿ ವರ್ಗಾವಣೆಯಾಗಿರುವ ಪ್ರಶಾಂತ್‌ಕುಮಾರ್‌ ಅವರು ಖಾಸಗಿ ಕೆಲಸದ ನಿಮಿತ್ತ ಗಯಾದಿಂದ ರಾಜಧಾನಿಗೆ ಸಂಚರಿಸುತ್ತಿದ್ದಾಗ ಈ ಪ್ರಕರಣ ನಡೆದಿದೆ.

ಸೀಟಿನ ವಿಷಯವಾಗಿ ಅಧಿಕಾರಿಗಳು ಹಾಗೂ ಅಪರಿಚಿತರೊಂದಿಗೆ ತೀವ್ರ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ತಮಗೆ ನಿಗದಿಯಾಗಿದ್ದ ಸೀಟಿನಲ್ಲಿ ಕೂರಲು ಪ್ರಶಾಂತ್‌ಕುಮಾರ್‌ ಯತ್ನಿಸಿದಾಗ ಅಪರಿಚಿತರು ಕೂಗಿದರು. ಮುಂದಿನ ನಿಲ್ದಾಣದಲ್ಲಿ ಗ್ರಾಮಸ್ಥರನ್ನು ಕರೆದ ಅಪರಿಚಿತರು ನ್ಯಾಯಧೀಶರ ಮೇಲೆ ಹಲ್ಲೆ ನಡೆಸಿದರು.

ಕೆಲ ಪ್ರಯಾಣಿಕರು ನ್ಯಾಯಾಧೀಶರನ್ನು ರಕ್ಷಿಸಿದರು. ಆ ವೇಳೆಗಾಗಲೇ ಅವರ ಮೂಗಿನಲ್ಲಿ ರಕ್ತ ಸುರಿಯುತ್ತಿತ್ತು. ಜೆಹನಾಬಾದ್‌ ನಿಲ್ದಾಣದಲ್ಲಿ ಇಳಿದ ಬಳಿಕ ಅವರು ದೂರು ನೀಡಿದರು.

ಈ ಕುರಿತು ಮಾತನಾಡಿದ ರೈಲ್ವೆ ಸೂಪರಿಂಟೆಂಡೆಂಟ್‌ ಆಶೋಕ್‌ಕುಮಾರ್ ಸಿಂಗ್, ನ್ಯಾಯಾಧೀಶರ ಮೇಲೆ ಹಲ್ಲೆ ನಡೆಸಿದ ಜೆಹನಾಬಾದ್‌ನ ಶಶಾಂಕ್‌ ಶೇಖರ್‌ ಹಾಗೂ ಸೂರಜ್‌ಕುಮಾರ್‌ ಅವರನ್ನು ಬಂಧಿಸಲಾಗಿದೆ. 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT