ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕ ವಾಹನಗಳ ಸಗಟು ಮಾರಾಟ ಶೇ 12.73ರಷ್ಟು ಹೆಚ್ಚಳ: ಎಸ್‌ಐಎಎಂ

Last Updated 11 ಡಿಸೆಂಬರ್ 2020, 6:52 IST
ಅಕ್ಷರ ಗಾತ್ರ

ನವದೆಹಲಿ: ಸಾಲು ಸಾಲು ಹಬ್ಬಗಳ ಕಾರಣದಿಂದಾಗಿ ನವೆಂಬರ್‌ನಲ್ಲಿ ಪ್ರಯಾಣಿಕ ವಾಹನಗಳ ಸಗಟು ಮಾರಾಟ ಚೇತರಿಕೆ ಕಂಡಿದೆ. ನವೆಂಬರ್‌ನಲ್ಲಿ 2,85,367 ವಾಹನಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 2,53,139 ವಾಹನಗಳು ಮಾರಾಟವಾಗಿದ್ದವು.

ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರಯಾಣಿಕ ವಾಹನಗಳ ಸಗಟು ಮಾರಾಟ ಶೇ 12.73ರಷ್ಟು ಹೆಚ್ಚಳ ಕಂಡಿದೆ ಎಂದು ಸೊಸೈಟಿ ಆಫ್‌ ಇಂಡಿಯನ್‌ ಆಟೊಮೊಬೈಲ್‌ ಮ್ಯಾನುಫ್ಯಾಕ್ಚರರ್ಸ್‌ (ಎಸ್‌ಐಎಎಂ) ಶುಕ್ರವಾರ ಹೇಳಿದೆ.

ನವೆಂಬರ್‌ನಲ್ಲಿ ಮಾರಾಟವಾದ ದ್ವಿಚಕ್ರ ವಾಹನಗಳ ಸಂಖ್ಯೆ 16,00,379. ಕಳೆದ ವರ್ಷ ನವೆಂಬರ್‌ನಲ್ಲಿ 14,10,939 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು. ಹೀಗಾಗಿ ಈ ವಾಹನಗಳ ಮಾರಾಟದಲ್ಲಿ ಶೇ 13.43ರಷ್ಟು ಹೆಚ್ಚಳವಾಗಿದೆ ಎಂದು ಎಸ್‌ಐಎಎಂ ಒದಗಿಸಿರುವ ಅಂಕಿ–ಅಂಶಗಳು ಹೇಳುತ್ತವೆ.

ತ್ರಿಚಕ್ರ ವಾಹನಗಳ ಮಾರಾಟ ಮಾತ್ರ ಚೇತರಿಕೆ ಕಂಡಿಲ್ಲ. ಕಳೆದ ವರ್ಷ ನವೆಂಬರ್‌ನಲ್ಲಿ 55,778 ತ್ರಿಚಕ್ರವಾಹನ ಮಾರಾಟವಾಗಿದ್ದವು. ಕಳೆದ ನವೆಂಬರ್‌ನಲ್ಲಿ 23,626 ವಾಹನಗಳು ಮಾರಾಟವಾಗಿದ್ದು, ಶೇ 57.64ರಷ್ಟು ಕುಸಿತ ಕಂಡಿದೆ.

‘ಪ್ರಯಾಣಿಕ ವಾಹನಗಳ ಸಗಟು ಮಾರಾಟದಲ್ಲಿ ಈ ಹೆಚ್ಚಳಕ್ಕೆ ಹಬ್ಬಗಳು ಕಾರಣ’ ಎಂದು ಎಸ್‌ಐಎಎಂನ ಪ್ರಧಾನ ನಿರ್ದೇಶಕ ರಾಜೇಶ್‌ ಮೆನನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT