ಸೋಮವಾರ, ಡಿಸೆಂಬರ್ 9, 2019
17 °C

ಬಿಎಂಡಬ್ಲ್ಯು; ಡೋಶನ್‌ ಮೋಟರನ್‌ ಡೀಲರ್ಸ್‌ ನೇಮಕ

Published:
Updated:
Prajavani

ಬೆಂಗಳೂರು: ವಿಲಾಸಿ ಕಾರ್‌ ತಯಾರಿಕಾ ಸಂಸ್ಥೆ ಬಿಎಂಡಬ್ಲ್ಯು ಇಂಡಿಯಾ, ಬೆಂಗಳೂರಿನಲ್ಲಿ ತನ್ನ ಎರಡನೇಯ ವಿತರಣಾ ಪಾಲುದಾರನಾಗಿ ಡೋಶನ್‌ ಮೋಟರನ್‌ ನೇಮಕ ಮಾಡಿದೆ.

ದೇಶದಾದ್ಯಂತ ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳಲ್ಲಿ ತನ್ನ ವಿತರಣಾ ಜಾಲ ವಿಸ್ತರಿಸಲು ಬಿಎಂಡಬ್ಲ್ಯು ಇಂಡಿಯಾ ಮುಂದಾಗಿದೆ. ಡೋಶನ್‌ ಮೋಟರನ್‌, ಇದುವರೆಗೆ ದೆಹಲಿ ಎನ್‌ಸಿಆರ್‌ನಲ್ಲಿ ನಾಲ್ಕು ಡೀಲರ್‌ಶಿಪ್‌ ಹೊಂದಿತ್ತು. ಈಗ ಬೆಂಗಳೂರಿಗೆ ಕಾಲಿಟ್ಟಿದೆ. ಈ ಷೋರೂಂ ವೈಟ್‌ಫೀಲ್ಡ್‌ ರಸ್ತೆಯಲ್ಲಿದೆ. ಮಾರಾಟ ನಂತರದ ಸೇವಾ ಕೇಂದ್ರವು ದೊಡ್ಡನಕುಂದಿ ಕೈಗಾರಿಕಾ ಪ್ರದೇಶದಲ್ಲಿ ಇದೆ.

ಷೋರೂಂ ಉದ್ಘಾಟನೆ ಸಂದರ್ಭದಲ್ಲಿ ಬಿಎಂಡಬ್ಲ್ಯು ಗ್ರೂಪ್‌ ಇಂಡಿಯಾದ ಸಿಇಒ ರುದ್ರತೇಜ್‌ ಸಿಂಗ್‌ ಮತ್ತು ಡೋಶನ್‌ ಮೋಟರನ್ನಿನ ಯದೂರ್‌ ಕಪೂರ್‌ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು