ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರಸಂಪರ್ಕ ಪರವಾನಗಿ ನಿಯಮ ಸಡಿಲ

Last Updated 2 ಅಕ್ಟೋಬರ್ 2021, 16:59 IST
ಅಕ್ಷರ ಗಾತ್ರ

ನವದೆಹಲಿ: ದೂರಸಂಪರ್ಕ ಕಂಪನಿಗಳು ಪರವಾನಗಿ ಶುಲ್ಕವನ್ನು ತಡವಾಗಿ ಪಾವತಿಸಿದರೆ ವಿಧಿಸುವ ಬಡ್ಡಿದರವನ್ನು ದೂರಸಂಪರ್ಕ ಇಲಾಖೆಯು ತಗ್ಗಿಸಿದೆ.

ಪರವಾನಗಿ ಶುಲ್ಕಕ್ಕೆ ಸಂಬಂಧಿಸಿದ ನಿಯಮದಲ್ಲಿ ತಿದ್ದುಪಡಿ ತರುವ ಮೂಲಕ ಇಲಾಖೆಯು ಈ ಕ್ರಮ ಕೈಗೊಂಡಿದೆ. ಇದರಿಂದಾಗಿ ದೂರಸಂಪರ್ಕ ವಲಯದ ಮೇಲಿನ ಆರ್ಥಿಕ ಹೊರೆಯು ತುಸು ತಗ್ಗುವ ನಿರೀಕ್ಷೆ ಮಾಡಲಾಗಿದೆ.

ನಿಯಮದಲ್ಲಿ ತಂದಿರುವ ತಿದ್ದುಪಡಿಯ ಪ್ರಕಾರ, ದೂರಸಂಪರ್ಕ ಕಂಪನಿಗಳು ವಿಳಂಬ ಪಾವತಿಗೆ ಎಸ್‌ಬಿಐನ ಒಂದು ವರ್ಷದ ಅವಧಿಯ ಎಂಸಿಎಲ್‌ಆರ್‌ ಮೇಲೆ ಶೇ 2ರಷ್ಟು ಬಡ್ಡಿದರ ಪಾವತಿಸಬೇಕು. ಈ ಮೊದಲು ಬಡ್ಡಿದರವು ಶೇ 4ರಷ್ಟು ಇತ್ತು. ಬಡ್ಡಿದರ ತಿಂಗಳಿಗೆ ಬದಲಾಗಿ ವಾರ್ಷಿಕವಾಗಿ ಲೆಕ್ಕಾಚಾರ ಮಾಡಲಾಗುತ್ತದೆ.

ಇಲಾಖೆಯು ಪರವಾನಗಿ ಷರತ್ತನ್ನು ಕೈಬಿಟ್ಟಿದೆ. ಅದರ ಅಡಿಯಲ್ಲಿ ಪರವಾನಗಿ ಶುಲ್ಕ ಪಡೆಯಲು ಕಂಪನಿಗಳು ಕಡಿಮೆ ಮೊತ್ತ ನೀಡಿದರೆ, ಪಾವತಿ ಮಾಡಬೇಕಿರುವ ಮೊತ್ತದ ಶೇ 50ರಷ್ಟಕ್ಕೆ ಸಮನಾಗಿ ದಂಡ ವಿಧಿಸಲಾಗುತ್ತಿತ್ತು. ಪಾವತಿ ಮಾಡಬೇಕಿರುವ ಒಟ್ಟಾರೆ ಮೊತ್ತದಲ್ಲಿ ಶೇ 10ರಷ್ಟು ಕಡಿಮೆ ಮೊತ್ತ ಪಾವತಿಸಿದರೆ ಅದಕ್ಕೆ ದಂಡ ಕಟ್ಟಬೇಕಿತ್ತು. ಅಕ್ಟೋಬರ್‌ 1ರಿಂದ ಜಾರಿಗೆ ಬರುವಂತೆ ಇದನ್ನು ಕೈಬಿಡಲಾಗಿದೆ.

ಇಲಾಖೆಯ ಈ ನಿರ್ಧಾರದಿಂದ ದೂರಸಂಪರ್ಕ ವಲಯದಲ್ಲಿ ವಹಿವಾಟು ನಡೆಸುವುದು ಸುಲಭವಾಗಲಿದ್ದು, ಆರ್ಥಿಕ ಒತ್ತಡವೂ ಕಡಿಮೆ ಆಗಲಿದೆ ಎಂದುಸೆಲ್ಯುಲಾರ್‌ ಆಪರೇಟರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾದ (ಸಿಒಎಐ) ಪ್ರಧಾನ ನಿರ್ದೇಶಕ ಎಸ್‌.ಪಿ. ಕೊಚ್ಚಾರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT