ಡಬಲ್‌ ಹಾರ್ಸ್‌: ತೆಂಗಿನ ಎಣ್ಣೆ ಬಿಡುಗಡೆ

7

ಡಬಲ್‌ ಹಾರ್ಸ್‌: ತೆಂಗಿನ ಎಣ್ಣೆ ಬಿಡುಗಡೆ

Published:
Updated:
Prajavani

ಬೆಂಗಳೂರು: ಪೌಷ್ಟಿಕಾಂಶಭರಿತ ಮತ್ತು ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡುವ ಡಬಲ್‌ ಹಾರ್ಸ್‌ ಕಂಪನಿಯು ತೆಂಗಿನ ಹಾಲು ಮತ್ತು ಶುದ್ಧ ತೆಂಗಿನ ಎಣ್ಣೆಯನ್ನು ರಾಜ್ಯದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಉತ್ಪನ್ನ ರಾಯಭಾರಿ, ನಟಿ ಕುಮಾರಿ ಶೋಭನಾ ಅವರು ಈ ಎರಡೂ ಉತ್ಪನ್ನಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು.

‘ತೆಂಗಿನಕಾಯಿಯ ತಿರುಳು ಬಳಸಿ ತೆಂಗಿನ ಹಾಲು ಸಿದ್ಧಪಡಿಸಲಾಗಿದೆ. ಕೂದಲು, ಚರ್ಮಕ್ಕೆ ಉತ್ತಮ ಪೋಷಣೆ ಮಾಡುತ್ತದೆ. ತೂಕ ಇಳಿಸಲು, ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೂ ಸಹಕಾರಿಯಾಗಿದೆ. ಲ್ಯಾಕ್ಟೋಸ್‌ ರಹಿತವಾಗಿದ್ದು ಹಾಲಿಗೆ ಪರ್ಯಾಯವಾಗಿ ಬಳಸಬಹುದು. ತೆಂಗಿನ ಎಣ್ಣೆ ಶೇ 100ರಷ್ಟು ಶುದ್ಧವಾಗಿದೆ’ ಎಂದು ಡಬಲ್‌ ಹಾರ್ಸ್‌ನ ಮಾತೃಸಂಸ್ಥೆ ಮಂಜಿಲಾಸ್‌ ಸಮೂಹದ ವ್ಯವಸ್ಥಾಪಕ ವಿನೋದ್‌ ಮಂಜಿಲಾ ಮಾಹಿತಿ ನೀಡಿದರು.

ತೆಂಗಿನಹಾಲು 200 ಎಂಎಲ್‌ ಹಾಗೂ ಶುದ್ಧ ತೆಂಗಿನ ಎಣ್ಣೆ 250 ಎಂಎಲ್‌ಗಳಲ್ಲಿ ಲಭ್ಯವಿದೆ. ಈ ಉತ್ಪನ್ನಗಳು ‌ ದೇಶ ಹಾಗೂ ವಿದೇಶಗಳಲ್ಲಿ ಸೂಪರ್‌ಮಾರ್ಕೆಟ್, ಹೈಪರ್‌ ಮಾರ್ಕೆಟ್‌, ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ದೊರೆಯಲಿವೆ ಎಂದು ಅವರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !