ದುಬೈ: ಅಮೆರಿಕದ ಡಾಲರ್ ಮೌಲ್ಯವು ಹೆಚ್ಚಳವಾಗಿರುವ ಬೆನ್ನಲ್ಲೇ ದುಬೈನಲ್ಲಿ ಚಿನ್ನದ ಬೆಲೆ ಕುಸಿದಿದೆ. ಹೀಗಾಗಿ ಅಲ್ಲಿನ ಗೋಲ್ಡ್ಸೂಕ್ನಲ್ಲಿ ಚಿನ್ನದ ಬೆಲೆಯು ಸೋಮವಾರ 10 ದಿರಮ್ನಷ್ಟು ಇಳಿಕೆ ದಾಖಲಿಸಿದೆ.

ಜಾಗತಿಕವಾಗಿ ಚಿನ್ನದ ದರ ಪ್ರತಿ ಔನ್ಸ್ಗೆ (28.3495 ಗ್ರಾಂ) 5,100 ಡಾಲರ್ (₹4,70,926)ನಷ್ಟಿದೆ. ದುಬೈನ ಆಭರಣ ಸಮೂಹದ ಮಾಹಿತಿ ಪ್ರಕಾರ, 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ 613.25 ದಿರಮ್ನಷ್ಟಿತ್ತು (₹15,401). ಕಳೆದ ವಾರಾಂತ್ಯದಲ್ಲಿ ಪ್ರತಿ ಗ್ರಾಂಗೆ ₹15,653 (623.25 ದಿರಮ್) ಬೆಲೆ ಇತ್ತು.

22 ಕ್ಯಾರೆಟ್, 21 ಕ್ಯಾರೆಟ್, 18 ಕ್ಯಾರೆಟ್ ಮತ್ತು 14 ಕ್ಯಾರೆಟ್ ಚಿನ್ನದ ದರವು ಪ್ರತಿ ಗ್ರಾಂಗೆ ಕ್ರಮವಾಗಿ 567.75, 544.50, 466.75 ಹಾಗೂ 363 ದಿರಮ್ನಷ್ಟಿದೆ.

ರಿಯಲ್ ಟೈಂನಲ್ಲಿ ಚಿನ್ನ ಖರೀದಿ ಹಾಗೂ ಮಾರಾಟ ನಡೆಸುವವರಿಗಾಗಿಯೇ ಇರುವ ‘ಸ್ಪಾಟ್ ಗೋಲ್ಡ್’ ವಹಿವಾಟಿನಲ್ಲಿ ಪ್ರತಿ ಔನ್ಸ್ಗೆ 5099.14 ಡಾಲರ್ನಷ್ಟು ದರ ನಿಗದಿಯಾಗಿದೆ. ಇದು ಶೇ 1.41ರಷ್ಟು ಕುಸಿತ ದಾಖಲಿಸಿದೆ.

ಬೆಳ್ಳಿ ಬೆಲೆಯೂ ಶೇ 1.61ರಷ್ಟು ಕುಸಿದಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.

ಅಮೆರಿಕ, ಇಸ್ರೇಲ್ ಮತ್ತು ಇರಾನ್ ಸಂಘರ್ಷದಿಂದಾಗಿ ಸುರಕ್ಷಿತ ಹೂಡಿಕೆಯ ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚಾಗಿದ್ದರೂ, ಡಾಲರ್ ಮೌಲ್ಯ ಹೆಚ್ಚಳದಿಂದ ಹಳದಿ ಲೋಹದ ಬೆಲೆ ಇಳಿಕೆಯಾಗಿದೆ. ಹೂಡಿಕೆದಾರರು ನಗದನ್ನು ಡಾಲರ್ನಲ್ಲಿ ಬಯಸುತ್ತಾರೆ. ಮತ್ತೊಂದೆಡೆ ಡಾಲರ್ ಮೌಲ್ಯ ಏರಿಕೆಯಾಗುತ್ತಲೇ ಇದೆ. ಇವೆಲ್ಲದ ಪರಿಣಾಮ ನೇರವಾಗಿ ಚಿನ್ನದ ಮೇಲಾಗುತ್ತಿದೆ. ಯುದ್ಧವು ಇನ್ನಷ್ಟು ಹೀಗೇ ಮುಂದುವರಿದಲ್ಲಿ, ಜಾಗತಿಕ ವ್ಯಾಪಾರ ಮತ್ತು ಇಂಧನ ಪೂರೈಕೆ ಇನ್ನಷ್ಟು ಬಿಗಡಾಯಿಸಲಿದೆ ಎಂದು ತಜ್ಞರು ತಿಳಿಸಿರುವುದಾಗಿ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.