ಭಾನುವಾರ, ಡಿಸೆಂಬರ್ 6, 2020
22 °C

ಇ–ಕಾಮರ್ಸ್‌ ಹಬ್ಬದ ಮಾರಾಟ: ಸ್ಮಾರ್ಟ್‌ಫೋನ್‌ಗೆ ಬೇಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಇ–ಕಾಮರ್ಸ್‌ ಕಂಪನಿಗಳು ಆಯೋಜಿಸಿದ್ದ ಹಬ್ಬದ ಸಂದರ್ಭದ ಮಾರಾಟ ಮೇಳದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಉತ್ತಮ ಬೇಡಿಕೆ ಬಂದಿದೆ. ಒಟ್ಟಾರೆ ಮಾರಾಟದಲ್ಲಿ ಸ್ಮಾರ್ಟ್‌ಫೋನ್‌ಗಳ ಮಾರಾಟದ ಪ್ರಮಾಣ ಶೇಕಡ 47ರಷ್ಟಾಗಿದೆ ಎಂದು ಸಂಶೋಧನಾ ಸಂಸ್ಥೆ ರೆಡ್‌ಸೀರ್‌ ಮಂಗಳವಾರ ತಿಳಿಸಿದೆ.

ಅಕ್ಟೋಬರ್‌ 15ರಿಂದ 21ರವರೆಗಿನ ಅವಧಿಯಲ್ಲಿ ಪ್ರತಿ ನಿಮಿಷಕ್ಕೆ ಒಟ್ಟು ₹ 1.5 ಕೋಟಿಯಷ್ಟು ಮೌಲ್ಯದ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿವೆ ಎಂದು ಅದು ಹೇಳಿದೆ.

ಇ–ಕಾಮರ್ಸ್‌ ಕಂಪನಿಗಳು ಒಟ್ಟಾರೆಯಾಗಿ ₹ 29,930 ಕೋಟಿ ಮೌಲ್ಯದ ಸರಕುಗಳನ್ನು ಮಾರಾಟ ಮಾಡಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹ 19,710 ಕೋಟಿ ಮೌಲ್ಯದ ಸರಕುಗಳನ್ನು ಅವು ಮಾರಾಟ ಮಾಡಿದ್ದವು ಎಂದು ಅದು ತನ್ನ ವರದಿಯಲ್ಲಿ ತಿಳಿಸಿದೆ.

ಫ್ಲಿಪ್‌ಕಾರ್ಟ್ ಸಮೂಹ ಮತ್ತು ಅಮೆಜಾನ್‌ ಮೂಲಕ ನಡೆದ ಒಟ್ಟಾರೆ ಮಾರಾಟದಲ್ಲಿ ಫ್ಲಿಪ್‌ಕಾರ್ಟ್‌ ಸಮೂಹ ಶೇ 68ರಷ್ಟು ಪಾಲು ಹೊಂದಿ, ಮುಂಚೂಣಿಯಲ್ಲಿದೆ. ಇ–ಕಾಮರ್ಸ್‌ ಕಂಪನಿಗಳು ನಡೆಸಿದ ಒಟ್ಟಾರೆ ಮಾರಾಟದಲ್ಲಿ ಫ್ಲಿಪ್‌ಕಾರ್ಟ್‌ ಸಮೂಹ ಮತ್ತು ಅಮೆಜಾನ್‌ನ ಒಟ್ಟಾರೆ ಪಾಲು ಶೇ 90ಕ್ಕಿಂತಲೂ ಹೆಚ್ಚಿನದ್ದಾಗಿದೆ. ಆನ್‌ಲೈನ್‌ ವೇದಿಕೆಗಳ ಮೂಲಕ ಮಾರಾಟ ಮಾಡಿರುವ ವ್ಯಾಪಾರಿಗಳ ಪ್ರಮಾಣದಲ್ಲಿ ಶೇ 85ರಷ್ಟು ಏರಿಕೆಯಾಗಿದೆ.

ಗ್ರಾಹಕರು ಈ ಬಾರಿ ಕಡಿಮೆ ಬೆಲೆಯ ಉತ್ಪನ್ನಗಳ ಖರೀದಿಗೆ ಹೆಚ್ಚಿನ ಗಮನ ನೀಡಿದ್ದಾರೆ. ಈ ಬಾರಿ ಎರಡನೇ ಶ್ರೇಣಿಯ ನಗರಗಳಿಂದ ಬಂದಿರುವ ಮಾರಾಟಗಾರರ ಪ್ರಮಾಣ ಶೇ 55ಕ್ಕಿಂತಲೂ ಅಧಿಕವಾಗಿದೆ. ಹೊಸ ಮಾದರಿಗಳ ಬಿಡುಗಡೆ ಮತ್ತು ಕೈಗೆಟುಕುವ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಮೂರು ಅಂಶಗಳು ಈ ಬಾರಿ ಮಾರಾಟ ಪ್ರಮಾಣದಲ್ಲಿನ ಹೆಚ್ಚಳಕ್ಕೆ ಕಾರಣ ಎಂದು ರೆಡ್‌ಸೀರ್‌ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು