ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಎಣ್ಣೆ ಪೊಟ್ಟಣದ ಮೇಲೆ ತಾಪಮಾನ ಉಲ್ಲೇಖ ಬೇಡ: ಕೇಂದ್ರ

Last Updated 25 ಆಗಸ್ಟ್ 2022, 16:06 IST
ಅಕ್ಷರ ಗಾತ್ರ

ನವದೆಹಲಿ: ಅಡುಗೆ ಎಣ್ಣೆ ತಯಾರಕರು, ಪ್ಯಾಕ್ ಮಾಡುವವರು ಮತ್ತು ಆಮದು ಮಾಡಿಕೊಳ್ಳುವವರು ಪೊಟ್ಟಣದಲ್ಲಿ ಎಷ್ಟು ಎಣ್ಣೆ ಇದೆ ಎಂಬುದನ್ನು ಪ್ರಮಾಣ ಹಾಗೂ ತೂಕದ ಲೆಕ್ಕದಲ್ಲಿ ತಿಳಿಸಬೇಕು ಎಂದು ಕೇಂದ್ರ ಸರ್ಕಾರವು ಸೂಚಿಸಿದೆ. ಈ ನಿಯಮವು 2023ರ ಜನವರಿ 15ರಿಂದ ಜಾರಿಗೆ ಬರಲಿದೆ.

ಅಡುಗೆ ಎಣ್ಣೆ ತೂಕವು ಬೇರೆ ಬೇರೆ ತಾಪಮಾನದಲ್ಲಿ ಬೇರೆ ಬೇರೆಯಾಗಿ ಇರುತ್ತದೆ. ಹೀಗಾಗಿ ಕಂಪನಿಗಳು ಅಡುಗೆ ಎಣ್ಣೆಯ ಪ್ಯಾಕ್‌ ಮೇಲೆ ತಾಪಮಾನವನ್ನು ಉಲ್ಲೇಖಿಸದೆಯೇ ಅದರಲ್ಲಿ ಎಷ್ಟು ಎಣ್ಣೆ ಇದೆ ಎಂಬುದನ್ನು ಪ್ರಮಾಣ ಮತ್ತು ತೂಕದ ಲೆಕ್ಕದಲ್ಲಿ ತಿಳಿಸಬೇಕು. ಅಲ್ಲಿ ನಮೂದಿಸಿರುವಷ್ಟೇ ಅಡುಗೆ ಎಣ್ಣೆಯು ಪೊಟ್ಟಣದಲ್ಲಿ ಇರಬೇಕು ಎಂಬುದು ಇದರ ಉದ್ದೇಶ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿದೆ.

ಅಡುಗೆ ಎಣ್ಣೆ ಮಾರಾಟ ಮಾಡುವ ಕೆಲವು ಕಂಪನಿಗಳು ನ್ಯಾಯಸಮ್ಮತವಲ್ಲದ ವಹಿವಾಟುಗಳಲ್ಲಿ ತೊಡಗಿಕೊಂಡಿವೆ ಎಂಬ ದೂರುಗಳು ಗ್ರಾಹಕರಿಂದ ಬಂದ ಕಾರಣ ಸಚಿವಾಲಯ ಈ ಸೂಚನೆ ನೀಡಿದೆ.

ಕೆಲವು ಕಂಪನಿಗಳು 60 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ಪ್ಯಾಕ್ ಮಾಡಿದಾಗ ಅಡುಗೆ ಎಣ್ಣೆಯ ತೂಕ ಎಷ್ಟು ಎಂಬುದನ್ನು ಪ್ಯಾಕ್ ಮೇಲೆ ನಮೂದಿಸುತ್ತಿವೆ. ವಾಸ್ತವದಲ್ಲಿ ಅಡುಗೆ ಎಣ್ಣೆಯನ್ನು 30 ಡಿಗ್ರಿ ಸೆಲ್ಸಿಯನ್ ತಾಪಮಾನದಲ್ಲಿ ಪ್ಯಾಕ್ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT