ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಎಣ್ಣೆ: ತಾಪಮಾನ ಉಲ್ಲೇಖ ಕೈಬಿಡಲು ಗಡುವು ವಿಸ್ತರಣೆ

Last Updated 30 ಜನವರಿ 2023, 16:58 IST
ಅಕ್ಷರ ಗಾತ್ರ

ನವದೆಹಲಿ: ಅಡುಗೆ ಎಣ್ಣೆ ಪೊಟ್ಟಣದ ಮೇಲೆ ತಾಪಮಾನ ಉಲ್ಲೇಖಿಸದೇ ಪೊಟ್ಟಣದಲ್ಲಿ ಎಷ್ಟು ಎಣ್ಣೆ ಇದೆ ಎಂಬುದನ್ನು ಪ್ರಮಾಣ ಹಾಗೂ ತೂಕದ ಲೆಕ್ಕದಲ್ಲಿ ನಮೂದಿಸಲು ಅಡುಗೆ ಎಣ್ಣೆ ತಯಾರಕರು, ಪ್ಯಾಕ್ ಮಾಡುವವರು ಮತ್ತು ಆಮದು ಮಾಡಿಕೊಳ್ಳುವವರಿಗೆ ನೀಡಿದ್ದ ಗಡುವನ್ನು ಕೇಂದ್ರ ಸರ್ಕಾರವು ಆರು ತಿಂಗಳವರೆಗೆ ವಿಸ್ತರಣೆ ಮಾಡಿದೆ.

ಪೊಟ್ಟಣದಲ್ಲಿ ಬದಲಾವಣೆ ಮಾಡಲು ಈ ಮೊದಲು ಜನವರಿ 15ರ ಗಡುವು ನೀಡಲಾಗಿತ್ತು. ಉದ್ಯಮದ ಮನವಿಯ ಮೇರೆಗೆ ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ವಾಸ್ತವದಲ್ಲಿ ಅಡುಗೆ ಎಣ್ಣೆಯನ್ನು 30 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ಪ್ಯಾಕ್ ಮಾಡಬೇಕು. ಒಂದೊಮ್ಮೆ 21 ಡಿಗ್ರಿ ಸೆಲ್ಸಿಯಸ್‌ನಲ್ಲಿ ಪ್ಯಾಕ್‌ ಮಾಡಿದರೆ ಆಗ 919 ಗ್ರಾಂ ಎಂದು ನಮೂದಿಸಬೇಕಾಗುತ್ತದೆ. 60 ಡಿಗ್ರಿ ಸೆಲ್ಸಿಯಸ್‌ನಲ್ಲಿ ಪ್ಯಾಕ್‌ ಮಾಡಿದರೆ ಆಗ ತೂಕವು 892.6 ಗ್ರಾಂ ಆಗುತ್ತದೆ. ಹೀಗೆ ಬೇರೆ ಬೇರೆ ತಾಪಮಾನಗಳಲ್ಲಿ ಎಣ್ಣೆಯ ತೂಕವು ಬೇರೆ ಬೇರೆ ಬರುವುದರಿಂದ ತಾಪಮಾನ ಉಲ್ಲೇಖ ಕೈಬಿಡಲು ನಿರ್ಧರಿಸಲಾಗಿದೆ.

ಅಡುಗೆ ಎಣ್ಣೆ ಮಾರಾಟ ಮಾಡುವ ಕೆಲವು ಕಂಪನಿಗಳು ನ್ಯಾಯಸಮ್ಮತವಲ್ಲದ ವಹಿವಾಟುಗಳಲ್ಲಿ ತೊಡಗಿಕೊಂಡಿವೆ ಎಂಬ ದೂರುಗಳು ಗ್ರಾಹಕರಿಂದ ಬಂದ ಕಾರಣ ಸಚಿವಾಲಯ ಈ ಕ್ರಮ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT