ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಎಣ್ಣೆ ದರ ಇಳಿಮುಖ: ಆಹಾರ ಕಾರ್ಯದರ್ಶಿ

Last Updated 22 ಜೂನ್ 2022, 15:40 IST
ಅಕ್ಷರ ಗಾತ್ರ

ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಇಳಿಕೆ ಹಾಗೂ ಸಕಾಲದಲ್ಲಿ ಸರ್ಕಾರದ ಮಧ್ಯಪ್ರವೇಶದಿಂದಾಗಿ ಅಡುಗೆ ಎಣ್ಣೆಗಳ ಚಿಲ್ಲರೆ ಮಾರಾಟ ಬೆಲೆ ಇಳಿಕೆ ಆಗುತ್ತಿದೆ ಎಂದು ಆಹಾರ ಕಾರ್ಯದರ್ಶಿ ಸುಧಾನ್ಶು ಪಾಂಡೆ ತಿಳಿಸಿದ್ದಾರೆ.

ಕಡಲೆಕಾಯಿ ಎಣ್ಣೆ ಹೊರತುಪಡಿಸಿ ಉಳಿದೆಲ್ಲ ಅಡುಗೆ ಎಣ್ಣೆಗಳ ದರವು ಸದ್ಯ ಕೆ.ಜಿಗೆ ₹ 150ರಿಂದ ₹ 190ರ ನಡುವೆ ಇದೆ ಎಂದು ಸರ್ಕಾರ ತಿಳಿಸಿದೆ. ಕಳೆದ ವಾರ ಅದಾನಿ ವಿಲ್ಮರ್‌ ಮತ್ತು ಮದರ್‌ ಡೈರಿ ಕಂಪನಿಗಳು ಎಂಆರ್‌ಪಿಯನ್ನು ₹ 10ರಿಂದ ₹ 15ರವರೆಗೆ ಇಳಿಕೆ ಮಾಡಿವೆ.

ಗ್ರಾಹಕ ವ್ಯವಹಾರಗಳ ಸಚಿವಾಲಯದ ಮಾಹಿತಿಯ ಪ್ರಕಾರ, ಕಡೆಲೆಕಾಯಿ ಎಣ್ಣೆ ದರವು ಜೂನ್‌ 1ರಂದು ಕೆ.ಜಿಗೆ ₹ 86.43 ಇದ್ದಿದ್ದು ಜೂನ್‌ 21ರ ಅಂತ್ಯಕ್ಕೆ ₹ 188.14ಕ್ಕೆ ಬಂದಿದೆ. ಸಾಸಿವೆ ಎಣ್ಣೆ ದರ ₹ 183.68ರಿಂದ ₹ 180.85ಕ್ಕೆ ಇಳಿಕೆ ಆಗಿದೆ.

ಸೋಯಾ ಎಣ್ಣೆ ಬೆಲೆ ₹ 169.65ರಿಂದ ₹ 167.67ಕ್ಕೆ, ಸೂರ್ಯಕಾಂತಿ ಎಣ್ಣೆ ದರ ₹ 193ರಿಂದ ₹ 189.99ಕ್ಕೆ ಇಳಿಕೆ ಆಗಿದೆ. ತಾಳೆ ಎಣ್ಣೆ ದರವು ₹ 156.4ರಿಂದ ₹ 152.52ಕ್ಕೆ ಇಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT