ಷೇರುಪೇಟೆ ಮಾಹಿತಿಗೆ ‘ಟೆಕ್ಸ್‌3’ ಆ್ಯಪ್‌

7

ಷೇರುಪೇಟೆ ಮಾಹಿತಿಗೆ ‘ಟೆಕ್ಸ್‌3’ ಆ್ಯಪ್‌

Published:
Updated:

ಬೆಂಗಳೂರು: ಷೇರು ಮಾರುಕಟ್ಟೆಯ ವಹಿವಾಟುದಾರರಿಗೆ ಸುಲಭದಲ್ಲಿ ಮತ್ತು ತ್ವರಿತಗತಿಯಲ್ಲಿ ಮಾಹಿತಿ ಒದಗಿಸುವ ‘ಟೆಕ್ಸ್‌3’ ಸೌಲಭ್ಯಕ್ಕೆ ಎಡಲ್‌ವೈಸ್‌ ಚಾಲನೆ ನೀಡಿದೆ.

ವಹಿವಾಟುದಾರರ ಅಗತ್ಯಕ್ಕೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ವಿವರ ಒಂದೇ ವೇದಿಕೆ ಅಡಿಯಲ್ಲಿ ಸರಳವಾಗಿ ಒದಗಿಸುವ ಸಾಧನ ಇದಾಗಿದೆ.

‘ಮಾರುಕಟ್ಟೆಯ ಸಂಶೋಧನೆ ಮತ್ತು ಸುಮಾರು 600ಕ್ಕೂಹೆಚ್ಚು ವಹಿವಾಟುದಾರರಿಂದ ಸಂಗ್ರಹಿಸಿದ ಮಾಹಿತಿ ಆಧರಿಸಿ ಈ ಡೆಕ್ಸ್‌ಟಾಪ್‌ ಟ್ರೇಡಿಂಗ್‌ ಟರ್ಮಿನಲ್‌ ಅಭಿವೃದ್ಧಿಪಡಿಸಲಾಗಿದೆ’ ಎಂದು ಸಂಸ್ಥೆಯ ವೈಯಕ್ತಿಕ ಸಲಹಾ ವಿಭಾಗದ ಮುಖ್ಯಸ್ಥ ರಾಹುಲ್‌ ಜೈನ್‌ ತಿಳಿಸಿದರು.

‘ಟೆಕ್ಸ್‌3’  ಆ್ಯಪ್‌ ಸಂಪೂರ್ಣ ಉಚಿತವಾಗಿದೆ. ‘ದೃಶ್ಯ ಮಾಧ್ಯಮದ ರೂಪದಲ್ಲಿಯೂ ಇಲ್ಲಿ ಮಾಹಿತಿ ನೀಡಲಾಗುತ್ತದೆ. ಒಂದೇ ಪರದೆ ಮೇಲೆ ಷೇರು ಮಾರಕಟ್ಟೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಇದು ಒದಗಿಸುತ್ತದೆ’ ಎಂದು ಅವರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !