ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿಪ್ಟ್‌ಗೆ ಭಾರತದಿಂದ ಗೋಧಿ

Last Updated 15 ಏಪ್ರಿಲ್ 2022, 16:12 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದಿಂದ ಗೋಧಿ ಆಮದು ಮಾಡಿಕೊಳ್ಳಲು ಈಜಿಪ್ಟ್ ಒಪ್ಪಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ.

ರಷ್ಯಾ–ಉಕ್ರೇನ್ ಯುದ್ಧದ ಕಾರಣದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಗೋಧಿಯ ಲಭ್ಯತೆ ಕಡಿಮೆಯಾಗಿದೆ. ಉಕ್ರೇನ್ ಮತ್ತು ರಷ್ಯಾ ಗೋಧಿಯನ್ನು ಭಾರಿ ಪ್ರಮಾಣದಲ್ಲಿ ರಫ್ತು ಮಾಡುತ್ತವೆ.

ಈಜಿಪ್ಟ್ ದೇಶವು ಭಾರತದಿಂದ 10 ಲಕ್ಷ ಟನ್ ಗೋಧಿಯನ್ನು ಆಮದು ಮಾಡಿಕೊಳ್ಳಲಿದೆ. ಏಪ್ರಿಲ್‌ನಲ್ಲಿಯೇ 2.40 ಲಕ್ಷ ಟನ್ ಗೋಧಿ ಖರೀದಿಸಲಿದೆ.

‘ಭಾರತದ ರೈತರು ಜಗತ್ತಿಗೆ ಆಹಾರ ನೀಡುತ್ತಿದ್ದಾರೆ. ಜಗತ್ತು ಆಹಾರ ವಸ್ತುಗಳ ಪೂರೈಕೆಗೆ ಪರ್ಯಾಯ ವ್ಯವಸ್ಥೆ ಕಡೆ ನೋಡುತ್ತಿರುವಾಗ ಮೋದಿ ನೇತೃತ್ವದ ಸರ್ಕಾರವು ಮುಂದಕ್ಕೆ ಬಂದಿದೆ. ನಮ್ಮ ರೈತರು ನಮ್ಮ ಕಣಜಗಳು ಉಕ್ಕಿ ಹರಿಯುವಂತೆ ನೋಡಿಕೊಂಡಿದ್ದಾರೆ’ ಎಂದು ಗೋಯಲ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT