ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ | ಮೂಲಸೌಕರ್ಯ ವಲಯದ ಕುಸಿತ

Last Updated 30 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಮೂಲಸೌಕರ್ಯ ವಲಯದ ಬೆಳವಣಿಗೆಯು ಮಾರ್ಚ್‌ನಲ್ಲಿ ದಾಖಲೆಯ ಶೇ 6.5ರಷ್ಟು ಕುಸಿತ ಕಂಡಿದೆ.

ಕೋವಿಡ್‌ ಪಿಡುಗು ಮತ್ತು ದಿಗ್ಬಂಧನವು ದೇಶಿ ಆರ್ಥಿಕತೆಯನ್ನುನಷ್ಟಕ್ಕೆ ದೂಡಿರುವ ಮೊದಲ ಸೂಚನೆ ಇದಾಗಿದೆ.

2019ರ ಮಾರ್ಚ್‌ನಲ್ಲಿ ಈ ವಲಯದ ಬೆಳವಣಿಗೆ ಶೇ 5.8 ಮತ್ತು ಈ ವರ್ಷದ ಫೆಬ್ರುವರಿಯಲ್ಲಿ ಶೇ 7ರಷ್ಟು ದಾಖಲಾಗಿತ್ತು.

ಕಚ್ಚಾತೈಲ, ನೈಸರ್ಗಿಕ ಅನಿಲ, ತೈಲ ಸಂಸ್ಕರಣೆ ಮತ್ತು ರಸಗೊಬ್ಬರ, ಉಕ್ಕು, ಸಿಮೆಂಟ್‌ ಹಾಗೂ ವಿದ್ಯುತ್‌ ವಲಯಗಳ ಉತ್ಪಾದನೆ ಇಳಿಕೆ ಕಂಡಿರುವುದೇ ಈ ಕುಸಿತಕ್ಕೆ ಕಾರಣವಾಗಿದೆ.

2019–20 ಏಪ್ರಿಲ್‌–ಮಾರ್ಚ್‌ ಅವಧಿಯಲ್ಲಿ ಮೂಲಸೌಕರ್ಯ ವಲಯದ ಬೆಳವಣಿಗೆ ಶೇ 0.6ರಷ್ಟಾಗಿದೆ. 2018–19ರಲ್ಲಿ ಶೇ 4.4ರಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT