ನವದೆಹಲಿ: ಹಣಕಾಸಿನ ಸಂಕಷ್ಟ, ವಿಮಾನಗಳ ಅಲಭ್ಯತೆ ಹಾಗೂ ಇತರ ಆಂತರಿಕ ಸಮಸ್ಯೆಗಳ ಕಾರಣದಿಂದಾಗಿ ಕಳೆದ 10 ವರ್ಷಗಳಲ್ಲಿ ಒಟ್ಟು 11 ವಿಮಾನಯಾನ ಕಂಪನಿಗಳು ಸೇವೆ ಸ್ಥಗಿತಗೊಳಿಸಿವೆ ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಗೆ ಸೋಮವಾರ ತಿಳಿಸಿದೆ.

ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ ಮೊಹೋಲ್ ಅವರು ‘ವಿಮಾನಯಾನ ಕಂಪನಿಗಳು ವಾಣಿಜ್ಯಕ ಅಂಶಗಳನ್ನು ಪರಿಗಣಿಸಿ ಕಾರ್ಯಾಚರಣೆ ನಡೆಸುತ್ತಿವೆ, ಈ ವಲಯವು ಸರ್ಕಾರದ ನಿಯಂತ್ರಣದಿಂದ ಮುಕ್ತವಾಗಿದೆ. ವಿಮಾನಯಾನ ಸೇವಾ ವಲಯದಲ್ಲಿ ಸಮತೋಲನ ಸಾಧಿಸಲು ಮತ್ತು ವಲಯವನ್ನು ಸದೃಢವಾಗಿಸಲು ಸರ್ಕಾರ ಬದ್ಧವಾಗಿದೆ’ ಎಂದು ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.

ಈ ಅವಧಿಯಲ್ಲಿ ಏರ್ಏಷ್ಯಾ ಪ್ರೈ.ಲಿ. ಕಂಪನಿಯು ಏರ್ ಇಂಡಿಯಾ ಎಕ್ಸ್ಪ್ರೆಸ್ ಲಿಮಿಟೆಡ್ನಲ್ಲಿ ವಿಲೀನಗೊಂಡಿದೆ. ಟಾಟಾ ಎಸ್ಐಎ ಏರ್ಲೈನ್ಸ್ ಲಿಮಿಟೆಡ್ (ವಿಸ್ತಾರಾ) ಕಂಪನಿಯು ಏರ್ ಇಂಡಿಯಾ ಲಿಮಿಟೆಡ್ನಲ್ಲಿ ವಿಲೀನಗೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.