ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಬಸಿ ಆಫೀಸ್‌ ಪಾರ್ಕ್ಸ್‌ನ ಐಪಿಒ

Last Updated 15 ಮಾರ್ಚ್ 2019, 20:07 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಮೊದಲ ರಿಯಲ್‌ ಎಸ್ಟೇಟ್‌ ಇನ್‌ವೆಸ್ಟಮೆಂಟ್‌ ಟ್ರಸ್ಟ್‌ ಆಗಿರುವ (ಆರ್‌ಇಐಟಿ) ಎಂಬಸಿ ಆಫೀಸ್‌ ಪಾರ್ಕ್ಸ್‌, ಆರಂಭಿಕ ಸಾರ್ವಜನಿಕ ನೀಡಿಕೆ (ಐಪಿಒ) ಮೂಲಕ ಬಂಡವಾಳ ಪೇಟೆ ಪ್ರವೇಶಿಸಲಿದೆ.

‘ಇದೇ 18ರಂದು ಈ ನೀಡಿಕೆ ಆರಂಭವಾಗಲಿದ್ದು, 20ರಂದು ಕೊನೆಗೊಳ್ಳಲಿದೆ. ಪ್ರತಿ ಷೇರಿನ ನೀಡಿಕೆ ಬೆಲೆ ಪಟ್ಟಿಯನ್ನು ₹ 299 – ₹ 300ಕ್ಕೆ ನಿಗದಿಪಡಿಸಲಾಗಿದೆ. ಕನಿಷ್ಠ ಹೂಡಿಕೆ 800 ಷೇರುಗಳು ಇರಲಿದ್ದು, ನಂತರ 400ರ ಗುಣಾಕಾರದಲ್ಲಿ ಹೂಡಿಕೆ ಮಾಡಬಹುದು’ ಎಂದು ಕಂಪನಿಯ ಸಿಇಓ ಮೈಕಲ್‌ ಹಾಲಂಡ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ಐಪಿಒ ಮೂಲಕ ₹ 4,750 ಕೋಟಿಗಳಷ್ಟು ಬಂಡವಾಳ ಸಂಗ್ರಹಿಸಲು ಉದ್ದೇಶಿಸಲಾಗಿದೆ. ಈ ವರ್ಷದ ಇದುವರೆಗಿನ ಅತಿದೊಡ್ಡ ಐಪಿಒ ಇದಾಗಿದೆ’ ಎಂದರು.

ಕಂಪನಿಯ ಡೆಪ್ಯುಟಿ ಸಿಇಒ ವಿಕಾಸ್‌ ಖಡ್ಲೊಹಾ, ಹೂಡಿಕೆ ವ್ಯವಹಾರಗಳ ಸಂಪರ್ಕ ಮುಖ್ಯಾಧಿಕಾರಿ ರಿತ್ವಿಕ್‌ ಭಟ್ಟಾಚಾರ್ಯ, ಗೌರವ್‌ ಸಿಂಘಾಲ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT