ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಪಿಎಫ್‌ಒ : ಶೀಘ್ರದಲ್ಲೇ ನಿಧಿ ನಿರ್ವಾಹಕರ ನೇಮಕ ಅಂತಿಮ

Last Updated 15 ಆಗಸ್ಟ್ 2019, 13:27 IST
ಅಕ್ಷರ ಗಾತ್ರ

ನವದೆಹಲಿ: ಉದ್ಯೋಗಿಗಳ ಪಿಂಚಣಿ ನಿಧಿ ನಿರ್ವಹಿಸುವ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಮುಂದಿ ಮೂರು ವರ್ಷಗಳವರೆಗೆ ತನ್ನ ನಿಧಿಗಳನ್ನು ನಿರ್ವಹಿಸುವ ಸಂಸ್ಥೆಗಳನ್ನು ಮುಂದಿನ ವಾರ ನೇಮಕ ಮಾಡಿಕೊಳ್ಳಲಿದೆ.

‘ಇಪಿಎಫ್‌ಒ’ದ ಸಲಹಾ ಸಂಸ್ಥೆಯಾಗಿರುವ ಹಣಕಾಸು, ಲೆಕ್ಕಪತ್ರ ಮತ್ತು ಹೂಡಿಕೆ ಸಮಿತಿಯು (ಎಫ್‌ಎಐಸಿ) – ಎಚ್‌ಎಸ್‌ಬಿಸಿ, ಯುಟಿಐ ಮತ್ತು ಎಸ್‌ಬಿಐ ಮ್ಯೂಚುವಲ್ ಫಂಡ್‌ ಸಂಸ್ಥೆಗಳ ಹೆಸರುಗಳನ್ನು ಅಂತಿಮಗೊಳಿಸಿದೆ. ಹಿಂದಿನ ವರ್ಷದಲ್ಲಿನ ಸಾಧನೆ ಆಧರಿಸಿ ಈ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ವರ್ಷದ ಅಕ್ಟೋಬರ್‌ನಿಂದ ಮೂರು ವರ್ಷಗಳ ಅವಧಿಗೆ ಈ ಸಂಸ್ಥೆಗಳನ್ನು ನಿಧಿ ನಿರ್ವಾಹಕರಾಗಿ ನೇಮಕ ಮಾಡುವ ಸಾಧ್ಯತೆ ಇದೆ.

ಭವಿಷ್ಯ ನಿಧಿ ಸಂಘಟನೆಯ ನಿರ್ಧಾರ ಕೈಗೊಳ್ಳುವ ಉನ್ನತ ಸಮಿತಿಯಾಗಿರುವ ಟ್ರಸ್ಟಿಗಳ ಕೇಂದ್ರೀಯ ಮಂಡಳಿಯು (ಸಿಬಿಟಿ), ಇದೇ 21ರಂದು ಸಭೆ ಸೇರಿ ಈ ನೇಮಕವನ್ನು ಅಂತಿಮಗೊಳಿಸಲಿದೆ. ಹೊಸ ನಿಧಿ ನಿರ್ವಾಹಕರ ನೇಮಕವು ಕಳೆದ ವರ್ಷದ ಏಪ್ರಿಲ್‌ನಿಂದ ಬಾಕಿ ಉಳಿದಿದೆ. ಸದ್ಯಕ್ಕೆ ನಿಧಿ ನಿರ್ವಹಿಸುತ್ತಿರುವ ಐದು ಸಂಸ್ಥೆಗಳ ಸೇವೆಯನ್ನು ಹಲವಾರು ಬಾರಿ ವಿಸ್ತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT