ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಪಾವತಿ ಮಾಡದಿರುವ ಉದ್ಯೋಗದಾತ ಸಂಸ್ಥೆಗಳಿಗೆ ದಂಡ ಪಾವತಿ ಇಲ್ಲದೆಯೇ ಬಾಕಿ ಮೊತ್ತ ಪಾವತಿಸಿ ಕ್ಷಮಾದಾನ ಪಡೆದುಕೊಳ್ಳುವ ಯೋಜನೆಯ ಅನುಷ್ಠಾನಕ್ಕೆ ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ಮುಂದಾಗಿದೆ.

ಕೇಂದ್ರ ಕಾರ್ಮಿಕ ಸಚಿವ ಮನ್ಸುಕ್ ಮಾಂಡವೀಯ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಟ್ರಸ್ಟಿಗಳ ಕೇಂದ್ರೀಯ ಮಂಡಳಿ (ಸಿಬಿಟಿ) ಸಭೆಯು ‘ಇಪಿಎಫ್ಒ ಕ್ಷಮಾದಾನ ಯೋಜನೆ–2024’ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಬಹಳಷ್ಟು ಕಂಪನಿಗಳು ತಮ್ಮ ಉದ್ಯೋಗಿಗಳ ಭವಿಷ್ಯ ನಿಧಿ ಮೊತ್ತವನ್ನು ಇಪಿಎಫ್ಒಗೆ ಪಾವತಿಸಿಲ್ಲ. ಇದರಿಂದ ಉದ್ಯೋಗಿಗಳಿಗೆ ತೊಂದರೆಯಾಗಿದೆ. ಅಂತಹ ಕಂಪನಿಗಳು ಅಥವಾ ಸಂಸ್ಥೆಗಳು ಸ್ವಯಂಪ್ರೇರಣೆಯಿಂದ ಬಾಕಿ ಮೊತ್ತ ಪಾವತಿಸಲು ಅನುವಾಗುವಂತೆ ಈ ಯೋಜನೆ ರೂಪಿಸಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿದೆ.

ಆನ್ಲೈನ್ನಲ್ಲಿ ಘೋಷಣೆ ಮಾಡಿಕೊಳ್ಳುವ ಮೂಲಕ ಕಂಪನಿಗಳು ಈ ಯೋಜನೆಯಡಿ ಪ್ರಯೋಜನ ಪಡೆಯಬಹುದಾಗಿದೆ. ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ಗುರಿಯನ್ನೂ ಇದರಡಿ ಹೊಂದಲಾಗಿದೆ ಎಂದು ಹೇಳಿದೆ.

ಇಪಿಎಫ್ ಯೋಜನೆ 1952ಕ್ಕೆ ತಿದ್ದುಪಡಿ ತರಲು ಮಂಡಳಿಯು ಅನುಮೋದನೆ ನೀಡಿದೆ. ಇದರಡಿ ಉದ್ಯೋಗಿಗೆ ನಿವೃತ್ತಿಯ ಇಡುಗಂಟು ಪಾವತಿಯಾದ ದಿನದವರೆಗೂ ಬಡ್ಡಿ ಪಾವತಿಯಾಗಲಿದೆ. ಇದರಿಂದ ಇಪಿಎಫ್ಒ ಸದಸ್ಯರಿಗೆ ಹೆಚ್ಚಿನ ಆರ್ಥಿಕ ಪ್ರಯೋಜನ ದೊರೆಯಲಿದೆ.

ಇಡಿಎಲ್ಐ ವಿಸ್ತರಣೆ: ಇಪಿಎಫ್ ಖಾತೆದಾರರಿಗೆ ನೀಡುವ ಉದ್ಯೋಗಿಯ ಠೇವಣಿ ಆಧಾರಿತ ವಿಮಾ (ಇಡಿಎಲ್ಐ) ಸೌಲಭ್ಯದ ವಿಸ್ತರಣೆಗೆ ಮಂಡಳಿಯು ಅನುಮೋದನೆ ನೀಡಿದೆ.

ಪ್ರಸಕ್ತ ವರ್ಷದ ಏಪ್ರಿಲ್ 28ರಿಂದ ಪೂರ್ವಾನ್ವಯವಾಗುವಂತೆ ಈ ಯೋಜನೆಯಡಿ ಸೌಲಭ್ಯ ದೊರೆಯಲಿದೆ. ಯೋಜನೆಯಡಿ ಕನಿಷ್ಠ ₹2.5 ಲಕ್ಷ ಹಾಗೂ ಗರಿಷ್ಠ ₹7 ಲಕ್ಷ ವಿಮಾ ಸೌಲಭ್ಯ ದೊರೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.