ಶನಿವಾರ, ಜುಲೈ 2, 2022
20 °C

ಇಂದಿನ ವಾಸ್ತವ ಆಧರಿಸಿ ‍ಪಿಎಫ್‌ ಬಡ್ಡಿ: ನಿರ್ಮಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ನೌಕರರ ಭವಿಷ್ಯನಿಧಿಗೆ ನೀಡಲು ಉದ್ದೇಶಿಸಿರುವ ಶೇಕಡ 8.1ರಷ್ಟು ಬಡ್ಡಿಯು ಇತರ ಸಣ್ಣ ಉಳಿತಾಯ ಯೋಜನೆಗಳು ನೀಡುತ್ತಿರುವ ಬಡ್ಡಿ ಪ್ರಮಾಣಕ್ಕಿಂತ ಹೆಚ್ಚಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅಲ್ಲದೆ, ಇಂದಿನ ವಾಸ್ತವವನ್ನು ಆಧರಿಸಿ ಬಡ್ಡಿ ದರ ಪರಿಷ್ಕರಿಸಲಾಗಿದೆ ಎಂದೂ ಅವರು ಸಂಸತ್ತಿಗೆ ತಿಳಿಸಿದ್ದಾರೆ.

ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಧರ್ಮದರ್ಶಿಗಳ ಮಂಡಳಿಯು ಬಡ್ಡಿ ದರವನ್ನು ಶೇ 8.1ಕ್ಕೆ ನಿಗದಿಪಡಿಸುವ ತೀರ್ಮಾನ ಕೈಗೊಂಡಿದೆ. ಸುಕನ್ಯಾ ಸಮೃದ್ಧಿ ಯೋಜನೆ (ಶೇ 7.6ರಷ್ಟು), ಹಿರಿಯ ನಾಗರಿಕರ ಉಳಿತಾಯ ಯೋಜನೆ (ಶೇ 7.4), ಪಿಪಿಎಫ್‌ (ಶೇ 7.1) ಅಡಿ ನೀಡುವ ಬಡ್ಡಿ ಪ್ರಮಾಣ ಪಿಎಫ್‌ಗಿಂತ ಕಡಿಮೆ ಇದೆ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು