ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿನ ಪಿಂಚಣಿಗೆ ಅರ್ಜಿ ಸಲ್ಲಿಸಲು ಇದ್ದ ಕಾಲಾವಕಾಶ ವಿಸ್ತರಿಸಿದ ಇಪಿಎಫ್‌ಒ

Last Updated 27 ಫೆಬ್ರುವರಿ 2023, 11:39 IST
ಅಕ್ಷರ ಗಾತ್ರ

ನವದೆಹಲಿ: ಉದ್ಯೋಗಿಗಳ ಪಿಂಚಣಿ ಯೋಜನೆಯ (ಇಪಿಎಸ್) ಅಡಿಯಲ್ಲಿ ಹೆಚ್ಚಿನ ಪಿಂಚಣಿಗೆ ನೌಕರರು ಹಾಗೂ ಉದ್ಯೋಗದಾತರು ಜಂಟಿಯಾಗಿ ಅರ್ಜಿ ಸಲ್ಲಿಸುವ ಕಡೇ ದಿನವನ್ನು ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಮೇ 3ರ ವರೆಗೆ ವಿಸ್ತರಿಸಿದೆ.

ಹೆಚ್ಚಿನ ಪಿಂಚಣಿಗೆ ಅರ್ಜಿ ಸಲ್ಲಿಸಲು ಮಾರ್ಚ್‌ 3 ಕಡೇ ದಿನವಾಗಿತ್ತು. ಆದರೆ ಅದನ್ನು ವಿಸ್ತರಿಸುವ ಮೂಲಕ ಉದ್ಯೋಗಿಗಳು ಮತ್ತು ಉದ್ಯೋಗದಾತರ ಆತಂಕವನ್ನು ಇಪಿಎಫ್‌ಒ ದೂರ ಮಾಡಿದೆ.

ಹೆಚ್ಚಿನ ಪಿಂಚಣಿ ಆಯ್ಕೆಗೆ ಅರ್ಜಿ ಸಲ್ಲಿಲು ಕೊನೆಯ ದಿನಾಂಕ ಮೇ 3, 2023 ಎಂದು ಇಪಿಎಫ್‌ಒ ಏಕೀಕೃತ ಸದಸ್ಯರ ಪೋರ್ಟಲ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಹೆಚ್ಚಿನ ಪಿಂಚಣಿ ಆಯ್ಕೆ ಮಾಡಲು ನೌಕರರ ಭವಿಷ್ಯ ನಿಧಿ ಸಂಸ್ಥೆ ಎಲ್ಲಾ ಅರ್ಹ ಸದಸ್ಯರಿಗೆ ನಾಲ್ಕು ತಿಂಗಳ ಕಾಲಾವಕಾಶವನ್ನು ನೀಡಬೇಕು ಎಂದು ಈ ಹಿಂದೆ 2022ರ ನವೆಂಬರ್ 4 ರಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿತ್ತು.

ಅದರಂತೆ, ಅರ್ಜಿ ಸಲ್ಲಿಕೆಗೆ ಮಾರ್ಚ್ 3 ಕೊನೆ ದಿನವಾಗಿತ್ತು. ಹೊಸ ಯೋಜನೆ ಬಗ್ಗೆ ಅರಿವಿಲ್ಲದ ನೌಕರರಲ್ಲಿ ಆಯ್ಕೆ ಗೊಂದಲಗಳ ಜೊತೆಗೆ ಮನೆ ಮಾಡಿದ್ದ ಡೆಡ್‌ಲೈನ್‌ ಆತಂಕ ಸದ್ಯ ದೂರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT