ನವದೆಹಲಿ: ನೌಕರರ ಪಿಂಚಣಿ ಯೋಜನೆ – 1995ರ (ಇಪಿಎಸ್–95) ಅಡಿಯಲ್ಲಿ ಕನಿಷ್ಠ ಮಾಸಿಕ ಪಿಂಚಣಿಯನ್ನು ₹1,000ಕ್ಕೆ ನಿಗದಿ ಮಾಡಿರುವ ಕ್ರಮದ ಬಗ್ಗೆ ಬಹಳ ತುರ್ತಾಗಿ ಮರುಪರಿಶೀಲನೆ ನಡೆಸಬೇಕಿದೆ ಎಂದು ಸಂಸತ್ತಿನ ಸಮಿತಿಯೊಂದು ಹೇಳಿದೆ. ಕನಿಷ್ಠ ಪಿಂಚಣಿ ಮೊತ್ತವು ವಾಸ್ತವಕ್ಕೆ ಹೆಚ್ಚು ಹತ್ತಿರವಾಗಬೇಕು ಎಂದು ಅದು ಹೇಳಿದೆ.

ಇಪಿಎಸ್–95 ಅಡಿಯಲ್ಲಿ ಪಿಂಚಣಿ ಪಡೆಯುತ್ತಿರುವವರು ಕನಿಷ್ಠ ಪಿಂಚಣಿ ಮೊತ್ತವನ್ನು ₹7,500ಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ಇರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಿತಿಯ ಅಭಿಪ್ರಾಯವು ಮಹತ್ವದ್ದಾಗುತ್ತದೆ.

ಜೀವನ ವೆಚ್ಚವು ಹೆಚ್ಚಳ ಕಂಡಿದ್ದರೂ ಇಪಿಎಸ್–95 ಅಡಿಯಲ್ಲಿ ನೀಡುವ ಮಾಸಿಕ ಕನಿಷ್ಠ ಪಿಂಚಣಿ ಮೊತ್ತವು ಬಹುಕಾಲದಿಂದ ಬದಲಾಗಿಲ್ಲ ಎಂದು ‘ಕಾರ್ಮಿಕರು, ಜವಳಿ ಮತ್ತು ಕೌಶಲ ಅಭಿವೃದ್ಧಿ ಕುರಿತ ಸಂಸತ್ತಿನ ಸ್ಥಾಯಿ ಸಮಿತಿ’ಯು ತನ್ನ ವರದಿಯಲ್ಲಿ ಹೇಳಿದೆ.

ಈಗಿನ ಮಾಸಿಕ ಕನಿಷ್ಠ ಪಿಂಚಣಿ ಮೊತ್ತವು ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳುವುದಕ್ಕೂ ಸಾಲದು. ಹೀಗಾಗಿ, ಇಪಿಎಸ್–95 ಅಡಿಯಲ್ಲಿ ಕನಿಷ್ಠ ಪಿಂಚಣಿ ಮೊತ್ತವನ್ನು ವಾಸ್ತವಕ್ಕೆ ಅನುಗುಣವಾಗಿ ಹೆಚ್ಚು ಮಾಡುವುದಕ್ಕೆ ತ್ವರಿತವಾಗಿ ಪರಿಶೀಲನೆ ನಡೆಸಬೇಕಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇಂದಿನ ಜೀವನ ವೆಚ್ಚಕ್ಕೆ ಅನುಗುಣವಾದ ಕನಿಷ್ಠ ಪಿಂಚಣಿ ದೊರೆಯುವಂತೆ ಮಾಡಲು ಇಪಿಎಸ್–95 ಯೋಜನೆಗೆ ಕೇಂದ್ರದ ಬಜೆಟ್ ಮೂಲಕ ನೆರವು ಒದಗಿಸುವುದು ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು, ಆ ಮೂಲಕ ಲಕ್ಷಾಂತರ ಮಂದಿ ನಿವೃತ್ತ ನೌಕರರಿಗೆ ಹೆಚ್ಚಿನ ಮಟ್ಟದ ಸಾಮಾಜಿಕ ಭದ್ರತೆ ಹಾಗೂ ಹಣಕಾಸಿನ ಸ್ಥಿರತೆಯನ್ನು ಒದಗಿಸಬೇಕು ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.