ನವದೆಹಲಿ: ಈಕ್ವಿಟಿ ಮ್ಯೂಚುವಲ್ ಫಂಡ್ ಯೋಜನೆಗಳು ಆಗಸ್ಟ್ನಲ್ಲಿ ₹ 8,666 ಕೋಟಿ ಬಂಡವಾಳ ಆಕರ್ಷಿಸಿವೆ. ಸತತ ಆರನೇ ತಿಂಗಳಿನಲ್ಲಿಯೂ ಬಂಡವಾಳ ಒಳಹರಿವು ಆದಂತಾಗಿದೆ.
ಒಟ್ಟಾರೆ ಹೂಡಿಕೆಯಲ್ಲಿ ಫ್ಲೆಕ್ಸಿ ಕ್ಯಾಪ್ಗಳಲ್ಲಿ ಆಗಿರುವ ಪ್ರಮಾಣವು ಹೆಚ್ಚಿಗೆ ಇದೆ. ಜುಲೈನಲ್ಲಿ ಈ ಯೋಜನೆಗಳಲ್ಲಿ ₹ 22,583 ಕೋಟಿ ಹೂಡಿಕೆ ಅಗಿತ್ತು ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ ಮಾಹಿತಿ ನೀಡಿದೆ.
ಈಕ್ವಿಟಿ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಮಾರ್ಚ್ನಲ್ಲಿ ₹ 9,115 ಕೋಟಿ, ಏಪ್ರಿಲ್ನಲ್ಲಿ ₹ 3,437 ಕೋಟಿ, ಮೇನಲ್ಲಿ ₹ 10,083 ಕೋಟಿ ಹಾಗೂ ಜೂನ್ನಲ್ಲಿ ₹ 5,988 ಕೋಟಿ ಹೂಡಿಕೆ ಆಗಿತ್ತು. 2020ರ ಜುಲೈನಿಂದ 2021ರ ಫೆಬ್ರುವರಿವರೆಗಿನ ಅವಧಿಗಳಲ್ಲಿ ಬಂಡವಾಳ ಹೊರಹರಿವು ಕಂಡುಬಂದಿತ್ತು.
ಹೂಡಿಕೆದಾರರು ಹೈಬ್ರಿಡ್ ಫಂಡ್ಗಳಲ್ಲಿ ಆಗಸ್ಟ್ನಲ್ಲಿ ₹ 18,706 ಕೋಟಿ ಹೂಡಿಕೆ ಮಾಡಿದ್ದಾರೆ. ಚಿನ್ನದ ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್) ₹ 24 ಕೋಟಿ ಹೂಡಿಕೆ ಆಗಿದೆ.
ಮ್ಯೂಚುವಲ್ ಫಂಡ್ ಉದ್ಯಮದ ನಿರ್ವಹಣಾ ಸಂಪತ್ತು ಮೌಲ್ಯವು ಆಗಸ್ಟ್ ಅಂತ್ಯಕ್ಕೆ ₹ 36.6 ಲಕ್ಷ ಕೋಟಿ ಆಗಿದೆ. ಜುಲೈ ತಿಂಗಳ ಅಂತ್ಯದಲ್ಲಿ ₹ 35.32 ಲಕ್ಷ ಕೋಟಿ ಇತ್ತು. ಮ್ಯೂಚುವಲ್ ಫಂಡ್ಗಳಲ್ಲಿ ಒಟ್ಟಾರೆ ಒಳಹರಿವು ಸಕಾರಾ ತ್ಮಕವಾಗಿದ್ದು, ಷೇರುಪೇಟೆ ಸೂಚ್ಯಂಕ ಗಳು ಸಾರ್ವಕಾಲಿಕ ದಾಖಲೆ ಮಟ್ಟವನ್ನು ತಲುಪಿರುವುದು ಮ್ಯೂಚುವಲ್ ಫಂಡ್ ಗಳ ನಿರ್ವಹಣಾ ಸಂಪತ್ತು ಮೌಲ್ಯವನ್ನು ₹ 36 ಲಕ್ಷ ಕೋಟಿಯನ್ನು ದಾಟುವಂತೆ ಮಾಡಿದೆ ಎಂದು ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಎನ್.ಎಸ್. ವೆಂಕಟೇಶ್ ಹೇಳಿದ್ದಾರೆ.