ಮ್ಯೂಚುವಲ್‌ ಫಂಡ್ಸ್‌ಗಳಲ್ಲಿ ಹೂಡಿಕೆ ಹೆಚ್ಚಳ

7

ಮ್ಯೂಚುವಲ್‌ ಫಂಡ್ಸ್‌ಗಳಲ್ಲಿ ಹೂಡಿಕೆ ಹೆಚ್ಚಳ

Published:
Updated:

ನವದೆಹಲಿ: ಷೇರುಗಳಲ್ಲಿ ಹಣ ಹೂಡಿಕೆ ಮಾಡುವ ಮ್ಯೂಚುವಲ್‌ ಫಂಡ್ಸ್‌ಗಳಲ್ಲಿನ ಜುಲೈ ತಿಂಗಳ ಹೂಡಿಕೆಯು ₹ 10,585 ಕೋಟಿಗಳಷ್ಟಾಗಿದೆ.

ಉದ್ದಿಮೆ ಸಂಸ್ಥೆಗಳ ಜೂನ್‌ ತ್ರೈಮಾಸಿಕದ ಸಾಧನೆಯು ನಿರೀಕ್ಷೆಗಿಂತ ಉತ್ತಮವಾಗಿರುವುದು ಮತ್ತು ವಾಡಿಕೆಯಂತೆ ಮಳೆಯಾಗಿರುವುದು ಹೂಡಿಕೆಗೆ ಉತ್ತೇಜನ ನೀಡಿವೆ.

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌ನಿಂದ ಜುಲೈವರೆಗಿನ ಅವಧಿಯಲ್ಲಿನ ಒಟ್ಟಾರೆ ಹೂಡಿಕೆಯು ₹ 43,300 ಕೋಟಿಗೆ ತಲುಪಿದೆ ಎಂದು ಮ್ಯೂಚುವಲ್‌ ಫಂಡ್ಸ್‌ಗಳ ಸಂಘವು (ಎಎಂಎಫ್‌ಐ) ತಿಳಿಸಿದೆ.

ಶೇ 10ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿನ ಹೂಡಿಕೆ ಹರಿವಿನಿಂದಾಗಿ ಷೇರುಗಳಲ್ಲಿ ವಹಿವಾಟು ನಡೆಸುವ ಮ್ಯೂಚುವಲ್‌ ಫಂಡ್‌ಗಳ ಸಂಪತ್ತು ನಿರ್ವಹಣಾ ಮೊತ್ತವು ಜುಲೈ ತಿಂಗಳ ಅಂತ್ಯಕ್ಕೆ ₹ 8.3 ಲಕ್ಷ ಕೋಟಿಗೆ ತಲುಪಿದೆ. ಮಾರ್ಚ್‌ ಅಂತ್ಯಕ್ಕೆ ಇದು ₹ 7.5 ಲಕ್ಷ ಕೋಟಿಗಳಷ್ಟಿತ್ತು.

ಕಾರ್ಪೊರೇಟ್‌ಗಳ ಉತ್ತಮ ಹಣಕಾಸು ಸಾಧನೆ ಮತ್ತು ವಾಡಿಕೆಯ ಪ್ರಮಾಣದ ಮುಂಗಾರು ಮಳೆಯು ಹೂಡಿಕೆದಾರರ ಉತ್ಸಾಹ ಹೆಚ್ಚಿಸಿವೆ. ಇತ್ತೀಚಿನ ದಿನಗಳಲ್ಲಿ ದೇಶದ ಸಾಮಾನ್ಯ ಹೂಡಿಕೆದಾರರಲ್ಲಿನ ಹಣಕಾಸು ಸಾಕ್ಷರತೆ ಪ್ರಮಾಣ ಹೆಚ್ಚುತ್ತಿದೆ. ದೀರ್ಘಾವಧಿ ಹೂಡಿಕೆಯ ಪ್ರಯೋಜನಗಳ ಬಗ್ಗೆ ಅವರಲ್ಲಿ ಅರಿವು ಹೆಚ್ಚುತ್ತಿದೆ. ಇದು ವ್ಯವಸ್ಥಿತ ಹೂಡಿಕೆ ಯೋಜನೆಯಲ್ಲಿನ (ಎಸ್‌ಐಪಿ– ಸಿಪ್‌) ಹೆಚ್ಚಳದಲ್ಲಿ ಪ್ರತಿಫಲನಗೊಳ್ಳುತ್ತಿದೆ. ‘ಎಸ್‌ಐಪಿ’ಯು ಅಲ್ಪಾವಧಿ ಏರಿಳಿತದಿಂದ ಹೂಡಿಕೆದಾರರಿಗೆ ರಕ್ಷಣೆ ನೀಡುತ್ತದೆ.

‘ಮ್ಯೂಚುವಲ್‌ ಫಂಡ್ಸ್‌ ಬಿಟ್ಟರೆ ಇತರ ಯಾವುದೇ ಹೂಡಿಕೆ ಉತ್ಪನ್ನಗಳು ದೀರ್ಘಾವಧಿಯಲ್ಲಿ ಎರಡಂಕಿಯಷ್ಟು ವರಮಾನ ತಂದುಕೊಡುವುದಿಲ್ಲ ಎನ್ನುವುದು ಹೂಡಿಕೆದಾರರಿಗೆ ಮನವರಿಕೆ ಆಗುತ್ತಿದೆ. ಹೀಗಾಗಿ ‘ಎಂಎಫ್‌’ಗಳಲ್ಲಿನ ಹೂಡಿಕೆಯತ್ತ ಹೆಚ್ಚು ಉತ್ಸುಕತೆ ತೋರಿಸುತ್ತಿದ್ದಾರೆ’ ಎಂದು ಇಂಡಿಯಾ ಬುಲ್ಸ್‌ ಅಸೆಟ್‌ ಮ್ಯಾನೇಜ್‌ಮೆಂಟ್‌ ಕಂಪನಿಯ ಈಕ್ವಿಟಿ ಫಂಡ್ಸ್‌ನ ಮುಖ್ಯಸ್ಥ ಸುಮಿತ್‌ ಭಟ್ನಾಗರ್‌ ಹೇಳಿದ್ದಾರೆ.

ದೊಡ್ಡ ಉದ್ದಿಮೆ ಸಂಸ್ಥೆಗಳ ಷೇರುಗಳ ಬೆಲೆಗಳು ಏರಿಕೆಯ ಹಾದಿಯಲ್ಲಿ ಇರುವುದು ಮತ್ತು ದೇಶಿ ಆರ್ಥಿಕತೆಯ ಮುನ್ನೋಟವು ಭರವಸೆದಾಯಕ ಆಗಿರುವ ಕಾರಣಕ್ಕೆ ಹೂಡಿಕೆ ಹರಿವು ಏರುಗತಿಯಲ್ಲಿ ಇದೆ ಎಂದು ಮಾರುಕಟ್ಟೆ ತ‌ಜ್ಞರು ವಿಶ್ಲೇಷಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !