ಭಾನುವಾರ, ಜೂನ್ 20, 2021
28 °C

ಇಎಸ್‌ಐ: ಕೊಡುಗೆ ದರ ಕಡಿತ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಆರೋಗ್ಯ ವಿಮೆ ಯೋಜನೆಗಾಗಿ ಉದ್ಯೋಗಿಗಳ ರಾಜ್ಯ ವಿಮೆ ನಿಗಮಕ್ಕೆ (ಇಎಸ್‌ಐಸಿ) ಮಾಲೀಕರು ಮತ್ತು ನೌಕರರು ನೀಡುವ ಕೊಡುಗೆಯ ದರವನ್ನು ಶೇ 6.5ರಿಂದ ಶೇ 4ಕ್ಕೆ ಇಳಿಸಲಾಗಿದೆ.

ಜುಲೈ 1ರಿಂದ ಜಾರಿಗೆ ಬರಲಿದೆ. ಉದ್ಯೋಗಿಗಳ ರಾಜ್ಯ ವಿಮೆಕಾಯ್ದೆಯಡಿ, ಮಾಲೀಕರ ಕೊಡುಗೆಯನ್ನು ಶೇ 4.75ರಿಂದ ಶೇ 3.25ಕ್ಕೆ ಮತ್ತು ಉದ್ಯೋಗಿಗಳ ಕೊಡುಗೆ ಶೇ1.75ರಿಂದ ಶೇ 0.75ಕ್ಕೆ ತಗ್ಗಿಸುವ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ 3.6 ಕೋಟಿ ಉದ್ಯೋಗಿಗಳು ಮತ್ತು 12.85 ಲಕ್ಷ ಮಾಲೀಕರಿಗೆ  ಪ್ರಯೋಜನ ದೊರೆಯಲಿದೆ. ಉದ್ದಿಮೆ ಸಂಸ್ಥೆಗಳಿಗೆ ವರ್ಷಕ್ಕೆ ₹ 5 ಸಾವಿರ ಕೋಟಿ ಉಳಿತಾಯವಾಗಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ಮಾಹಿತಿ ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು