ಪೆಟ್ರೋಲ್‌, ಡೀಸೆಲ್‌ ದರ ₹2.50 ಇಳಿಕೆ: ಅರುಣ್‌ ಜೇಟ್ಲಿ

7

ಪೆಟ್ರೋಲ್‌, ಡೀಸೆಲ್‌ ದರ ₹2.50 ಇಳಿಕೆ: ಅರುಣ್‌ ಜೇಟ್ಲಿ

Published:
Updated:

ನವದೆಹಲಿ: ತೈಲದ ಮೇಲಿನ ಅಬಕಾರಿ ಸುಂಕವನ್ನು ಒಂದೂವರೆ ರೂಪಾಯಿ ಕಡಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ತೈಲ ಮಾರಾಟ ಕಂಪನಿಗಳು ದರದಲ್ಲಿ ₹1 ಇಳಿಕೆ ಮಾಡಲಿವೆ. ಇದರಿಂದಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ₹2.50ರಷ್ಟು ಇಳಿಕೆಯಾಗಲಿದೆ ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ ಹೇಳಿದರು. 

ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸಲ್‌ ದರ ₹2.50 ಇಳಿಕೆ ಮಾಡಿದ್ದು, ರಾಜ್ಯ ಸರ್ಕಾರಗಳೂ ಸಹ  ವ್ಯಾಟ್‌ ಕಡಿತಗೊಳಿಸಲು ಮೂಲಕ ತೈಲ ದರ ಇಳಿಕೆಗೆ ಕ್ರಮವಹಿಸಬೇಕು. ಈ ಕುರಿತು ಮನವಿ ಮಾಡಿ ರಾಜ್ಯ ಸರ್ಕಾರಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು. 

ದೇಶದಾದ್ಯಂತ ತೈಲ ದರ ಕಡಿತ ತಕ್ಷಣದಿಂದಲೇ ಜಾರಿಗೆ ಬರಲಿದೆ. 

ಇನ್ನಷ್ಟು: ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ₹2 ಇಳಿಕೆ

ತೈಲದ ಮೇಲಿನ ಅಬಕಾರಿ ಸುಂಕ ಕಡಿತದಿಂದ ಪ್ರಸಕ್ತ ಸಾಲಿನಲ್ಲಿ ಸರ್ಕಾರದ ಬೊಕ್ಕಸಕ್ಕೆ ₹10,500 ಕೋಟಿ ಹೊರೆಯಾಗಲಿದೆ ಎಂದರು. 

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬ್ಯಾರೆಲ್‌ಗೆ 86 ಡಾಲರ್‌ ತಲುಪಿದೆ. ಇದು ನಾಲ್ಕು ವರ್ಷಗಳಲ್ಲಿಯೇ ಅಧಿಕ ದರವಾಗಿದೆ ಹಾಗೂ ಅಮೆರಿಕದ ಬಡ್ಡಿ ದರ ಶೇ 3.2ಕ್ಕೆ ಏರಿಕೆಯಾಗಿದೆ. ಈ ಎಲ್ಲ ಅಂಶಗಳು ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿವೆ ಎಂದು ಜೇಟ್ಲಿ ತೈಲ ಬೆಲೆ ನಿರಂತರ ಏರಿಕೆಯ ಕುರಿತು ವಿವರಿಸಿದರು.

* ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ಮೇಲಿನ ಮಾರಾಟ ತೆರಿಗೆ ಇಳಿಕೆ ಮಾಡಿ ಒಂದು ತಿಂಗಳಾಗಿದೆ. ಈಗ ಮತ್ತೆ ಸೆಸ್‌ ದರ ಇಳಿಕೆ ಇಲ್ಲ. 

– ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ 

             ದೇಶದ ಪ್ರಮುಖ ನಗರಗಳಲ್ಲಿ ಗುರುವಾರ ಪೆಟ್ರೋಲ್‌ ಮತ್ತು ಡೀಸೆಲ್‌ ದರ

ದೆಹಲಿ ₹84 ₹75.45
ಬೆಂಗಳೂರು ₹84.72 ₹75.89
ಮುಂಬೈ ₹91.34 ₹80.10

ಬರಹ ಇಷ್ಟವಾಯಿತೆ?

 • 10

  Happy
 • 3

  Amused
 • 0

  Sad
 • 0

  Frustrated
 • 7

  Angry

Comments:

0 comments

Write the first review for this !