ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಐಸಿ: ಆಸ್ತಿ, ಲಾಭದ ಮೌಲ್ಯ ₹ 5 ಲಕ್ಷ ಕೋಟಿ

Last Updated 3 ಫೆಬ್ರುವರಿ 2022, 15:24 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ಮಾಲೀಕತ್ವದಲ್ಲಿರುವ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಇಂದಿನ ಆಸ್ತಿಗಳ ಮೌಲ್ಯ ಹಾಗೂ ಭವಿಷ್ಯದ ಲಾಭಗಳ ಇಂದಿನ ಮೌಲ್ಯದ ಮೊತ್ತವು ₹ 5 ಲಕ್ಷ ಕೋಟಿಗಿಂತಲೂ ಹೆಚ್ಚು ಎಂದು ಕೇಂದ್ರ ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್‌ ಕಾಂತ ಪಾಂಡೆ ತಿಳಿಸಿದ್ದಾರೆ. ಇವರು ಎಲ್‌ಐಸಿಯ ಐಪಿಒ (ಷೇರುಗಳ ಆರಂಭಿಕ ಸಾರ್ವಜನಿಕ ಕೊಡುಗೆ) ಪ್ರಕ್ರಿಯೆಯ ಮೇಲ್ವಿಚಾರಣೆಯ ಹೊಣೆ ಹೊತ್ತಿದ್ದಾರೆ.

ಎಲ್‌ಐಸಿಯ ಆಸ್ತಿಗಳ ಇಂದಿನ ಮೌಲ್ಯ ಹಾಗೂ ಭವಿಷ್ಯದ ಲಾಭಗಳ ಇಂದಿನ ಮೌಲ್ಯ ಎಷ್ಟು ಎಂಬುದನ್ನು ತಿಳಿದುಕೊಳ್ಳಲು ಹೂಡಿಕೆದಾರರು ಕಾತರರಾಗಿ ಇದ್ದಾರೆ. ಎಲ್‌ಐಸಿಯ ಮೌಲ್ಯದ ಬಗ್ಗೆ ಊಹೆಗಳನ್ನು ಆಧರಿಸಿದ ವರದಿಗಳು ಪ್ರಕಟವಾಗಿವೆ. ಆದರೆ, ಸರ್ಕಾರದ ಅಧಿಕಾರಿಯೊಬ್ಬರು ಮೌಲ್ಯದ ಬಗ್ಗೆ ಖಚಿತವಾಗಿ ಮಾತನಾಡಿರುವುದು ಇದೇ ಮೊದಲು.

ಆಸ್ತಿಗಳ ಇಂದಿನ ಮೌಲ್ಯ ಹಾಗೂ ಭವಿಷ್ಯದ ಲಾಭಗಳ ಇಂದಿನ ಮೌಲ್ಯದ ಮೊತ್ತವು ಎಲ್‌ಐಸಿಯ ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿ ಇರಿಸಲು ಕೇಂದ್ರ ಸರ್ಕಾರಕ್ಕೆ ಎಲ್‌ಐಸಿ ಐಪಿಒ ಮಹತ್ವದ್ದು.

ಎಲ್ಐಸಿಯ ಮಾರುಕಟ್ಟೆ ಬಂಡವಾಳ ಮೌಲ್ಯವು, ಆಸ್ತಿಗಳ ಇಂದಿನ ಮೌಲ್ಯ ಹಾಗೂ ಭವಿಷ್ಯದ ಲಾಭಗಳ ಇಂದಿನ ಬೆಲೆಯ ಒಟ್ಟು ಮೊತ್ತಕ್ಕಿಂತ ಐದು ಪಟ್ಟು ಹೆಚ್ಚು ಇರಲಿದೆ ಎಂದು ಕೆಲವು ವರದಿಗಳು ಅಂದಾಜಿಸಿವೆ.ಸರ್ಕಾರವು ಎಲ್‌ಐಸಿಯಲ್ಲಿನ ಎಷ್ಟು ಷೇರುಪಾಲನ್ನು ಮಾರಾಟ ಮಾಡಲಿದೆ ಎಂಬ ಮಾಹಿತಿ ನೀಡಲು ಪಾಂಡೆ ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT