ಭಾನುವಾರ, ಜನವರಿ 19, 2020
26 °C

ಇಂದಿನಿಂದ ‘ಎಕ್ಸ್‌ಕಾನ್’ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿರ್ಮಾಣ ಸಲಕರಣೆಗಳ ದಕ್ಷಿಣಏಷ್ಯಾದ ಅತಿದೊಡ್ಡ ವ್ಯಾಪಾರ ಮೇಳ ‘ಎಕ್ಸ್‌ಕಾನ್’, ಮಂಗಳವಾರದಿಂದ ಐದು ದಿನಗಳವರೆಗೆ (ಡಿ.10 ರಿಂದ ಡಿ.14) ತುಮಕೂರು ರಸ್ತೆಯಲ್ಲಿನ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆಯಲಿದೆ.

ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಆಶ್ರಯದಲ್ಲಿ ಈ ಮೇಳ ಆಯೋಜಿಸಲಾಗಿದೆ. 21 ದೇಶಗಳ 1,250ಕ್ಕೂ ಅಧಿಕ ಪ್ರದರ್ಶಕರು ಭಾಗವಹಿಸಲಿದ್ದಾರೆ.

‘ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಮೇಳವನ್ನು ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಉಪಸ್ಥಿತರಿರಲಿದ್ದಾರೆ’ ಎಂದು ಎಕ್ಸ್‌ಕಾನ್‌ ಅಧ್ಯಕ್ಷ ವಿಪಿನ್‌ ಸೋಂಧಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘10ನೇ ಆವೃತ್ತಿಯ ಈ ಮೇಳವು ಅತಿ ದೊಡ್ಡದಾಗಿದ್ದು, 3 ಲಕ್ಷ ಚದರ ಮೀಟರ್‌ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ’ ಎಂದು ಎಕ್ಸ್‌ಕಾನ್‌ನ ಚಾಲನಾ ಸಮಿತಿ ಸದಸ್ಯ ಸಂದೀಪ್‌ ಸಿಂಗ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)