ಜೀವ ವಿಮೆ: ಪ್ರಾಶಸ್ತ್ಯದ ಹಣಕಾಸು ಮಾರ್ಗೋಪಾಯ

7

ಜೀವ ವಿಮೆ: ಪ್ರಾಶಸ್ತ್ಯದ ಹಣಕಾಸು ಮಾರ್ಗೋಪಾಯ

Published:
Updated:
Prajavani

ಬೆಂಗಳೂರು: ಮನೆ ನಿರ್ಮಾಣ, ಮಕ್ಕಳ ಶಿಕ್ಷಣ, ನಿವೃತ್ತಿಯ ಬದುಕು ಮತ್ತಿತರ ಉದ್ದೇಶಗಳಿಗೆ ವಿಮೆ ಸೌಲಭ್ಯ ಪಡೆಯುವುದಕ್ಕೆ ಭಾರತೀಯರು ಆದ್ಯತೆ ನೀಡುವುದು ಸಮೀಕ್ಷೆಯೊಂದರಲ್ಲಿ ತಿಳಿದು ಬಂದಿದೆ.

ಬದುಕಿನ ವಿವಿಧ ಹಂತಗಳಲ್ಲಿನ ಹಲವು ಬಗೆಯ ಹಣಕಾಸು ಅಗತ್ಯಗಳನ್ನು ಈಡೇರಿಸಿಕೊಳ್ಳಲು ಅನೇಕರ ಪಾಲಿಗೆ ಜೀವ ವಿಮೆಯು ಹೆಚ್ಚು ಪ್ರಾಶಸ್ತ್ಯದ ಹಣಕಾಸು ಮಾರ್ಗೋಪಾಯವಾಗಿದೆ ಎನ್ನುವುದು ಎಕ್ಸೈಡ್ ಲೈಫ್ ಇನ್ಸೂರೆನ್ಸ್‌ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಮಕ್ಕಳ ಮದುವೆಯ ವಿಷಯಕ್ಕೆ ಬಂದಾಗ ಪಾಲಕರು ನಿಶ್ಚಿತ ಠೇವಣಿ ಆಯ್ಕೆಯನ್ನು ಹೆಚ್ಚುವರಿಯಾಗಿ ಪಡೆಯುತ್ತಾರೆ. ಮೂವರಲ್ಲಿ ಒಬ್ಬರು ತಮ್ಮ ಹಣಕಾಸು ವಹಿವಾಟು ಕುರಿತು ದಾಖಲೆಗಳನ್ನೇ ಇಡುವುದಿಲ್ಲ. ಇಷ್ಟೇ ಪ್ರಮಾಣದ ಜನರು ಮಾತ್ರ ತಮ್ಮ ಹಣಕಾಸು ವಹಿವಾಟಿನ ಮಾಹಿತಿಯನ್ನು ಕುಟುಂಬದೊಂದಿಗೆ ಹಂಚಿಕೊಳ್ಳುತ್ತಾರೆ. ಸಮೀಕ್ಷೆಗೆ ಸ್ಪಂದಿಸಿದ ಶೇ 72ರಷ್ಟು ಜನರಿಗೆ ಉಯಿಲಿನ ಬಗ್ಗೆ ಗೊತ್ತಿದೆ. ಆದರೆ, ಉಯಿಲು ಮಾಡಿಸಿಲ್ಲ. ಈ ಡಿಜಿಟಲ್ ಸಮೀಕ್ಷೆಯಲ್ಲಿ 12 ನಗರಗಳ ಜನರು ಒಳಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !