ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ. ಪೋರ್ಟಲ್ ಸಮಸ್ಯೆ ವಾರದಲ್ಲಿ ನಿವಾರಣೆ: ಇನ್ಫೊಸಿಸ್

Last Updated 9 ಜೂನ್ 2021, 16:00 IST
ಅಕ್ಷರ ಗಾತ್ರ

ನವದೆಹಲಿ: ಆದಾಯ ತೆರಿಗೆ ವಿವರಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸುವ ಹೊಸ ಪೋರ್ಟಲ್‌ನಲ್ಲಿನ ಸಮಸ್ಯೆಗಳು ಈ ವಾರದಲ್ಲಿ ಸರಿಹೋಗಬಹುದು ಎಂದು ಐ.ಟಿಸೇವಾ ಕಂಪನಿ ಇನ್ಫೊಸಿಸ್ ಹೇಳಿದೆ.

ಹೊಸ ವೆಬ್‌ಸೈಟ್‌ನಲ್ಲಿನ ಸಮಸ್ಯೆಗಳನ್ನು ಸರಿಪಡಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇನ್ಫೊಸಿಸ್ ಹಾಗೂ ಅದರ ಅಧ್ಯಕ್ಷ ನಂದನ್ ನಿಲೇಕಣಿ ಅವರಲ್ಲಿ ಹೇಳಿದ್ದರು. ವೆಬ್‌ಸೈಟ್‌ನಲ್ಲಿನ ಸಮಸ್ಯೆಗಳನ್ನು ಬಳಕೆದಾರರು ನಿರ್ಮಲಾ ಅವರ ಗಮನಕ್ಕೆ ತಂದಿದ್ದರು.

‘ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲು ನಮ್ಮ ತಂಡಗಳು ಮುಂದಡಿ ಇರಿಸಿವೆ’ ಎಂದು ಇನ್ಫೊಸಿಸ್ ಬುಧವಾರ ಟ್ವೀಟ್ ಮೂಲಕ ತಿಳಿಸಿದೆ. ಐ.ಟಿ. ವಿವರಗಳನ್ನು ಪರಿಶೀಲಿಸಲು ತೆಗೆದುಕೊಳ್ಳುವ ಸಮಯವನ್ನು ಒಂದು ದಿನಕ್ಕೆ ಇಳಿಸಬೇಕು ಎಂಬ ಉದ್ದೇಶದಿಂದ ಹೊಸ ವ್ಯವಸ್ಥೆಯನ್ನು ರೂಪಿಸುವ ಕೆಲಸವನ್ನು 2019ರಲ್ಲಿ ಇನ್ಫೊಸಿಸ್‌ಗೆ ವಹಿಸಲಾಗಿತ್ತು. ಹೊಸ ಪೋರ್ಟಲ್‌ಅನ್ನು ಸೋಮವಾರ ಬಳಕೆಗೆ ಮುಕ್ತವಾಗಿಸಲಾಗಿತ್ತು.

‘ಮೊದಲ ದಿನ ನಾವು ಕೆಲವು ತಾಂತ್ರಿಕ ಸಮಸ್ಯೆಗಳನ್ನು ಗಮನಿಸಿದ್ದೇವೆ. ಅವುಗಳನ್ನು ಸರಿಪಡಿಸಲು ಕೆಲಸ ಮಾಡುತ್ತಿದ್ದೇವೆ. ಈ ಆರಂಭಿಕ ಸಮಸ್ಯೆಗಳ ಬಗ್ಗೆ ಇನ್ಫೊಸಿಸ್ ವಿಷಾದ ವ್ಯಕ್ತಪಡಿಸುತ್ತದೆ. ವ್ಯವಸ್ಥೆಯು ವಾರದಲ್ಲಿ ಸರಿಹೋಗಬಹುದು ಎಂಬ ನಿರೀಕ್ಷೆ ಇದೆ’ ಎಂದು ನಿಲೇಕಣಿ ಅವರು ಟ್ವೀಟ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT