ರಫ್ತು ವಹಿವಾಟು ಅಲ್ಪ ಪ್ರಗತಿ

7
ದೇಶದ ವ್ಯಾಪಾರ ಕೊರತೆ ಅಂತರದಲ್ಲಿ ಹೆಚ್ಚಳ

ರಫ್ತು ವಹಿವಾಟು ಅಲ್ಪ ಪ್ರಗತಿ

Published:
Updated:
Deccan Herald

ನವದೆಹಲಿ: ದೇಶದ ರಫ್ತು ವಹಿವಾಟು ನವೆಂಬರ್‌ನಲ್ಲಿ ಶೇ 0.80ರಷ್ಟು ಅಲ್ಪ ಪ್ರಗತಿ ಕಂಡಿದ್ದು, ₹ 1.90 ಲಕ್ಷ ಕೋಟಿಗೆ ತಲುಪಿದೆ.

ಆಮದು ವಹಿವಾಟು ಸಹ ಶೇ 4.31ರಷ್ಟು ಹೆಚ್ಚಾಗಿ ₹ 3.14 ಲಕ್ಷ ಕೋಟಿಗೆ ತಲುಪಿದೆ. ನವೆಂಬರ್‌ ತಿಂಗಳ ಆಮದು ವಹಿವಾಟಿನ ಪ್ರಗತಿ ದರ 2016ರ ಡಿಸೆಂಬರ್‌ ನಂತರದ ಅತ್ಯಂತ ಕನಿಷ್ಠ ಮಟ್ಟದ್ದಾಗಿದೆ ಎಂದು ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.

ಚಿನ್ನದ ಆಮದು ಶೇ 15.6ರಷ್ಟು ಇಳಿಕೆಯಾಗಿ ₹ 12,096 ಕೋಟಿಗೆ ತಲುಪಿದೆ. ಹೀಗಿದ್ದರೂ ರಫ್ತು ಮತ್ತು ಆಮದು ವಹಿವಾಟಿನ ನಡುವಣ ಅಂತರವಾದ ವ್ಯಾಪಾರ ಕೊರತೆ ಅಂತರ ₹ 1.08 ಲಕ್ಷ ಕೋಟಿಯಿಂದ ₹ 1.20 ಲಕ್ಷ ಕೋಟಿಗೆ ಏರಿಕೆಯಾಗಿದೆ.

‘ರಫ್ತು ವಹಿವಾಟು ಹೆಚ್ಚಿಸಲು ತಕ್ಷಣದ ಬೆಂಬಲ ಅಗತ್ಯವಿದೆ’ ಎಂದು ರಫ್ತುದಾರರ ಸಂಘಟನೆಗಳ ಒಕ್ಕೂಟದ (ಎಫ್‌ಐಇಒ) ಅಧ್ಯಕ್ಷ ಗಣೇಶ್‌ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

ವಲಯಕ್ಕೆ ನಗದು ಲಭ್ಯತೆ ಮತ್ತು ಸಬ್ಸಿಡಿ ದರದಲ್ಲಿ ಸಾಲ ಹೆಚ್ಚಿಸುವಂತೆಯೂ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಔಷಧ, ಎಲೆಕ್ಟ್ರಾನಿಕ್ಸ್‌, ಜವಳಿ, ಪೆಟ್ರೋಲಿಯಂ ಮತ್ತು ಪ್ಲಾಸ್ಟಿಕ್‌ ವಲಯಗಳು ಉತ್ತಮ ಪ್ರಗತಿ ಕಂಡಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಸೇವಾ ರಫ್ತು ಅಕ್ಟೋಬರ್‌ನಲ್ಲಿ ಶೇ 19ರಷ್ಟು ಏರಿಕೆಯಾಗಿದ್ದು, ₹ 1.21 ಲಕ್ಷ ಕೋಟಿಗೆ ತಲುಪಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !