‘ಮಾರ್ಚ್‌ನಲ್ಲಿ ರಫ್ತು ವಹಿವಾಟು ದಾಖಲೆ ಮಟ್ಟಕ್ಕೆ’

ಬುಧವಾರ, ಏಪ್ರಿಲ್ 24, 2019
33 °C
ವಾಣಿಜ್ಯ ಸಚಿವ ಸುರೇಶ್‌ ಪ್ರಭು ಹೇಳಿಕೆ

‘ಮಾರ್ಚ್‌ನಲ್ಲಿ ರಫ್ತು ವಹಿವಾಟು ದಾಖಲೆ ಮಟ್ಟಕ್ಕೆ’

Published:
Updated:

ನವದೆಹಲಿ: ‘ದೇಶದ ರಫ್ತು ವಹಿವಾಟು ಮಾರ್ಚ್‌ ತಿಂಗಳಿನಲ್ಲಿ ದಾಖಲೆ ಮಟ್ಟವಾದ ₹ 2.20 ಲಕ್ಷ ಕೋಟಿಗಳಿಗೆ ತಲುಪಲಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್‌ ಪ್ರಭು ತಿಳಿಸಿದ್ದಾರೆ.

‘ಔಷಧ ವಲಯದ ರಫ್ತು ವಹಿವಾಟು ಇದೇ ಮೊದಲ ಬಾರಿಗೆ ₹ 1.29 ಲಕ್ಷ ಕೋಟಿಗೆ ತಲುಪಿದೆ. ಹೀಗಾಗಿ ಮಾರ್ಚ್‌ನಲ್ಲಿ ಒಟ್ಟಾರೆ ರಫ್ತು ವಹಿವಾಟು ಗರಿಷ್ಠ ಮಟ್ಟದಲ್ಲಿ ಇರುವ ನಿರೀಕ್ಷೆ ಮಾಡಲಾಗಿದೆ.

‘ಹಲವು ವರ್ಷಗಳಿಂದ ರಫ್ತು ಇಳಿಮುಖವಾಗಿತ್ತು. ಆದರೆ, ಈ ವರ್ಷ ದಾಖಲೆ ಮಟ್ಟ ತಲುಪಲಿದೆ. 2018–19ರಲ್ಲಿ ಒಟ್ಟಾರೆ ರಫ್ತು ವಹಿವಾಟು ₹ 22.50 ಲಕ್ಷ ಕೋಟಿಗೆ ತಲುಪಲಿದೆ. ಜಾಗತಿಕ ವ್ಯಾಪಾರವು ಉತ್ತಮವಾಗಿರದ ಸ್ಥಿತಿಯಲ್ಲಿಯೂ ಈ ಪ್ರಗತಿ ಸಾಧ್ಯವಾಗಲಿದೆ’ ಎಂದು ಅವರು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !