ಗುರುವಾರ , ಸೆಪ್ಟೆಂಬರ್ 19, 2019
26 °C

ರಫ್ತು ನಾಲ್ಕು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ

Published:
Updated:

ನವದೆಹಲಿ: ದೇಶದ ರಫ್ತು ವಹಿವಾಟು ಏಪ‍್ರಿಲ್‌ನಲ್ಲಿ ನಾಲ್ಕು ತಿಂಗಳ ಕನಿಷ್ಠ ಮಟ್ಟವಾದ ಶೇ 0.64ಕ್ಕೆ ತಲು‍ಪಿದೆ.

ಎಂಜಿನಿಯರಿಂಗ್‌, ಹರಳು – ಚಿನ್ನಾಭರಣ, ಚರ್ಮ ಮತ್ತು ಇತರೆ ಉತ್ಪನ್ನಗಳ ರಫ್ತು ಇಳಿಕೆ ಆಗಿರುವುದರಿಂದ ಕನಿಷ್ಠ ಮಟ್ಟದ ಪ್ರಗತಿ ಕಂಡಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.

ಕಚ್ಚಾ ತೈಲ ಆಮದು ಶೇ 9.26ರಷ್ಟು ಮತ್ತು ಚಿನ್ನ ಆಮದು ಶೇ 54ರಷ್ಟು ಹೆಚ್ಚಾಗಿರುವುದರಿಂದ ಆಮದು ವಹಿವಾಟು ಶೇ 4.5ರಷ್ಟು ಹೆಚ್ಚಾಗಿದ್ದು ಆರು ತಿಂಗಳ ಗರಿಷ್ಠ ಮಟ್ಟದ್ದಾಗಿದೆ. 

ವ್ಯಾಪಾರ ಕೊರತೆ ಅಂತರ 2018ರ ನವೆಂಬರ್‌ ನಂತರ ₹ 1.07 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

Post Comments (+)