ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮದು, ರಫ್ತು ವಹಿವಾಟು ಇಳಿಕೆ

Last Updated 14 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಆಮದು ಮತ್ತು ರಫ್ತು ವಹಿವಾಟು ಆಗಸ್ಟ್‌ನಲ್ಲಿ ಇಳಿಕೆ ಕಂಡಿದೆ. ಇದರಿಂದ ವ್ಯಾಪಾರ ಕೊರತೆ ಅಂತರವೂ ತಗ್ಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.

ರಫ್ತು ವಹಿವಾಟು ಶೇ 6.05ರಷ್ಟು ಕಡಿಮೆಯಾಗಿ ₹ 1.85 ಲಕ್ಷ ಕೋಟಿಗೆ ಇಳಿಕೆಯಾಗಿದೆ. ಪೆಟ್ರೋಲಿಯಂ, ಎಂಜಿನಿಯರಿಂಗ್‌, ಚರ್ಮ, ಹರಳು ಮತ್ತು ಚಿನ್ನಾಭರಣ ರಫ್ತುನಲ್ಲಿ ಇಳಿಕೆ ಆಗಿದೆ. ಹೀಗಾಗಿ ಒಟ್ಟಾರೆ ರಫ್ತು ವಹಿವಾಟು ಕಡಿಮೆಯಾಗಿದೆ.

ಆಮದು ವಹಿವಾಟು ಶೇ 13.45ರಷ್ಟು ಕಡಿಮೆಯಾಗಿ ₹ 2.81 ಲಕ್ಷ ಕೋಟಿಗೆ ಇಳಿಕೆಯಾಗಿದೆ. 2016ರ ಆಗಸ್ಟ್‌ ಬಳಿಕ ಆಮದು ವಹಿವಾಟುಉ ಈ ಪ್ರಮಾಣದಲ್ಲಿ ಕುಸಿತ ಕಂಡಿದೆ.

ಆಮದು ರಫ್ತು ವಹಿವಾಟಿನ ನಡುವಣ ಅಂತರವಾದ, ವ್ಯಾಪಾರ ಕೊರತೆ ಅಂತರ ₹ 1.27 ಲಕ್ಷ ಕೋಟಿಯಿಂದ ₹ 95,495 ಕೋಟಿಗೆ ಇಳಿಕೆಯಾಗಿದೆ.

ಚಿನ್ನದ ಆಮದು ಶೇ 62.49ರಷ್ಟು ಕಡಿಮೆಯಾಗಿ ₹9,656 ಕೋಟಿಗೆ ತಲುಪಿದೆ.

2019ರ ಏಪ್ರಿಲ್‌–ಆಗಸ್ಟ್‌ ಅವಧಿಯಲ್ಲಿ ರಫ್ತು ಶೇ 1.53ರಷ್ಟು ಇಳಿಕೆಯಾಗಿದ್ದರೆ, ಆಮದು ಶೇ 5.68ರಷ್ಟು ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT