ಶನಿವಾರ, ಫೆಬ್ರವರಿ 22, 2020
19 °C

ಜಾಗತಿಕ ಆರ್ಥಿಕತೆಯ ಮಂದಗತಿಯ ಬೆಳವಣಿಗೆ: ರಫ್ತು ಶೇ 1.11ರಷ್ಟು ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ರಫ್ತು ವಹಿವಾಟು ಅಕ್ಟೋಬರ್‌ನಲ್ಲಿ ಶೇ 1.11ರಷ್ಟು ಇಳಿಕೆಯಾಗಿದ್ದು, ₹1.89 ಲಕ್ಷ ಕೋಟಿಗಳಷ್ಟಾಗಿದೆ.

ಪೆಟ್ರೋಲಿಯಂ, ಚರ್ಮದ ಉತ್ಪನ್ನಗಳು, ಅಕ್ಕಿ ಮತ್ತು ಟೀ ರಫ್ತು ಇಳಿಕೆ ಕಂಡಿರುವುದರಿಂದ ಒಟ್ಟಾರೆ ರಫ್ತು ವಹಿವಾಟು ಕಡಿಮೆಯಾಗಿದೆ.

ಆಮದು ವಹಿವಾಟು ಶೇ 16.31ರಷ್ಟು ಕಡಿಮೆಯಾಗಿದ್ದು, ಮೂರು ವರ್ಷಗಳ ಕನಿಷ್ಠ ಮಟ್ಟವಾದ ₹2.69 ಲಕ್ಷ ಕೋಟಿಗೆ ತಲುಪಿದೆ. 2016ರ ಜುಲೈ ಬಳಿಕ ಈ ಪ್ರಮಾಣದಲ್ಲಿ ರಫ್ತು ವಹಿವಾಟು ಇಳಿಕೆ ಕಂಡಿದೆ. 

ಚಿನ್ನದ ಆಮದು ಶೇ 5ರಷ್ಟು ಹೆಚ್ಚಾಗಿದ್ದು, ₹13,248 ಕೋಟಿಗಳಿಗೆ ತಲುಪಿದೆ. ತೈಲ ಆಮದು ಶೇ 32 ರಷ್ಟು ಇಳಿಕೆಯಾಗಿದೆ.

ಇದರಿಂದ ವ್ಯಾಪಾರ ಕೊರತೆ ಅಂತರ ₹1.29 ಲಕ್ಷ ಕೋಟಿಗಳಿಂದ ₹79,200 ಕೋಟಿಗಳಿಗೆ ಇಳಿಕೆಯಾಗಿದೆ.

ರಫ್ತು ವಹಿವಾಟು ನಡೆಸುತ್ತಿರುವ ಪ್ರಮುಖ 30 ವಲಯಗಳಲ್ಲಿ 18 ವಲಯಗಳು ನಕಾರಾತ್ಮಕ ಬೆಳವಣಿಗೆ ಕಂಡಿವೆ.

ಜಾಗತಿಕ ಆರ್ಥಿಕತೆಯು ಮಂದಗತಿಯಲ್ಲಿದೆ ಎನ್ನುವುದನ್ನು ರಫ್ತು ವಹಿವಾಟಿನ ಅಂಕಿ–ಅಂಶಗಳು ಸೂಚಿಸುತ್ತಿವೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರಫ್ತು ಉತ್ತೇಜನಾ ಕ್ರಮಗಳಿಂದಾಗಿ ಕೆಲವೇ ತಿಂಗಳುಗಳಲ್ಲಿ ರಫ್ತು ವಹಿವಾಟು ಹೆಚ್ಚಾಗಲಿದೆ’ ಎಂದು ವ್ಯಾಪಾರ ಉತ್ತೇಜನಾ ಮಂಡಳಿಯ ಅಧ್ಯಕ್ಷ ಮೋಹಿತ್‌ ಎಸ್‌. ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು