ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫ್ತು ವಹಿವಾಟು ಶೇ 2.25 ಹೆಚ್ಚಳ

Last Updated 14 ಆಗಸ್ಟ್ 2019, 20:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ರಫ್ತು ವಹಿವಾಟು ಜುಲೈನಲ್ಲಿ ಶೇ 2.25ರಷ್ಟು ಹೆಚ್ಚಾಗಿ ₹ 1.86 ಲಕ್ಷ ಕೋಟಿಗೆ ಏರಿಕೆಯಾಗಿದೆ.

ರಸಾಯನಿಕ, ಕಬ್ಬಿಣ ಮತ್ತು ಔಷಧ ವಲಯಗಳು ಸಕಾರಾತ್ಮಕ ಪ್ರಗತಿ ಕಂಡಿವೆ ಎಂದು ಸರ್ಕಾರ ತಿಳಿಸಿದೆ.

ಆಮದು ಶೇ 10.43ರಷ್ಟು ಹೆಚ್ಚಾಗಿ ₹ 2.84 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದರಿಂದ ವ್ಯಾಪಾರ ಕೊರತೆ ಅಂತರ ನಾಲ್ಕು ತಿಂಗಳ ಕನಿಷ್ಠ ಮಟ್ಟವಾದ ₹ 1.34 ಲಕ್ಷ ಕೋಟಿಯಿಂದ ₹ 92,300 ಕೋಟಿಗೆ ಇಳಿಕೆಯಾಗಿದೆ.

ಹರಳು, ಚಿನ್ನಾಭರಣ, ಎಂಜಿನಿಯರಿಂಗ್‌, ಪೆಟ್ರೋಲಿಯಂ ಉತ್ಪನ್ನಗಳು ನಕಾರಾತ್ಮಕ ಪ್ರಗತಿ ಕಂಡಿವೆ.

ತೈಲ ಆಮದು ಶೇ 22.15ರಷ್ಟು ಮತ್ತು ಚಿನ್ನದ ಆಮದು ಶೇ 42.2ರಷ್ಟು ಕಡಿಮೆಯಾಗಿವೆ.

‘ರಫ್ತು ವಹಿವಾಟು ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡಂಕಿ ಪ್ರಗತಿ ಕಾಣುವ ನಿರೀಕ್ಷೆ ಇದೆ’ ಎಂದು ವಾಣಿಜ್ಯ ಕಾರ್ಯದರ್ಶಿ ಅನುಪ್‌ ವಾಧವನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT