ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿಯಲ್ಲಿ ರಫ್ತು ವಹಿವಾಟು ಶೇ 5ರಷ್ಟು ಏರಿಕೆ

Last Updated 2 ಫೆಬ್ರುವರಿ 2021, 11:26 IST
ಅಕ್ಷರ ಗಾತ್ರ

ನವದೆಹಲಿ:ಕೇಂದ್ರ ವಾಣಿಜ್ಯ ಸಚಿವಾಲಯ ನೀಡಿರುವ ತಾತ್ಕಾಲಿಕ ಮಾಹಿತಿಯ ಪ್ರಕಾರ ದೇಶದ ರಫ್ತು ವಹಿವಾಟು ಜನವರಿಯಲ್ಲಿ ಶೇಕಡ 5.37ರಷ್ಟು ಏರಿಕೆ ಕಂಡಿದ್ದು, ₹ 1.98 ಲಕ್ಷ ಕೋಟಿಗಳಿಗೆ ತಲುಪಿದೆ.

ಔಷಧ ಮತ್ತು ಎಂಜಿನಿಯರಿಂಗ್‌ ವಲಯಗಳು ಆರೋಗ್ಯಕರ ಬೆಳವಣಿಗೆ ಕಂಡಿರುವುದರಿಂದ ಈ ಪ್ರಗತಿ ಸಾಧ್ಯವಾಗಿದೆ ಎಂದು ಸಚಿವಾಲಯ ಹೇಳಿದೆ. ವ್ಯಾಪಾರ ಕೊರತೆ ಅಂತರ ಶೇ 14.75ರಷ್ಟು ಇಳಿಕೆಯಾಗಿ ₹ 1.11 ಲಕ್ಷ ಕೋಟಿಗಳಷ್ಟಾಗಿದೆ.

ಆಮದು ವಹಿವಾಟು ಶೇ 2ರಷ್ಟು ಹೆಚ್ಚಾಗಿ ₹ 3.06 ಲಕ್ಷ ಕೋಟಿ ಆಗಿದೆ. ಔಷಧ ಮತ್ತು ಎಂಜಿನಿಯರಿಂಗ್‌ ರಫ್ತು ಕ್ರಮವಾಗಿ ಶೇ 16.4 ಮತ್ತು ಶೇ 19ರಷ್ಟು ಏರಿಕೆಯಾಗಿದೆ.

ಪೆಟ್ರೋಲಿಯಂ ಉತ್ಪನ್ನಗಳು, ಸಿದ್ಧ ಉಡುಪು ಹಾಗೂ ಚರ್ಮದ ಉತ್ಪನ್ನಗಳು ನಕಾರಾತ್ಮಕ ಪ್ರಗತಿ ಕಂಡಿದೆ. 2020ರ ಡಿಸೆಂಬರ್‌ನಲ್ಲಿಯೂ ರಫ್ತು ವಲಯವು ಶೇ 0.14ರಷ್ಟು ಅಲ್ಪ ಬೆಳವಣಿಗೆ ಕಂಡಿತ್ತು.

ಚಿನ್ನದ ಆಮದು 2021ರ ಜನವರಿಯಲ್ಲಿ ಶೇ 155ರಷ್ಟು ಏರಿಕೆಯಾಗಿದೆ. ಏಪ್ರಿಲ್‌–ಜನವರಿ ಅವಧಿಯಲ್ಲಿ ರಫ್ತು ವಹಿವಾಟು ಶೇ 13.66ರಷ್ಟು ಇಳಿಕೆಯಾಗಿದೆ. ಆಮದು ವಹಿವಾಟು ಸಹ ಶೇ 26ರಷ್ಟು ಇಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT